• img
  • img
  • img
  • img

ಗುತ್ತಿಗೆ ನಿರ್ವಹಣೆಯ ಹೋಟೆಲ್‌ಗಳು

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

  • ಪ್ಯಾರಾಡೈಸ್ ವೈಲ್ಡ್ ಹಿಲ್ಸ್ ರೆಸಾರ್ಟ್
  • ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್- ಮಲ್ಪೆ ಬೀಚ್

ಪ್ಯಾರಾಡೈಸ್ ವೈಲ್ಡ್ ಹಿಲ್ಸ್ ರೆಸಾರ್ಟ್

ನಿಗಮದ ಆಸ್ತಿಯಾಗಿರುವ ಪ್ಯಾರಾಡೈಸ್ ವೈಲ್ಡ್ ಹಿಲ್ಸ್ ರೆಸಾರ್ಟ್‍ನ್ನು ನಿರ್ವಹಣೆ ಮಾಡಲು ಒಪ್ಪಂದದ ಆಧಾರದ ಮೇಲೆ ಗುತ್ತಿಗೆಗೆ ನೀಡಲಾಗಿರುತ್ತದೆ. ಈ ರೆಸಾರ್ಟ್ ಸೊಂಪಾದ ಮತ್ತು ರಮಣೀಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದ್ದು, ಕರ್ನಾಟಕ ಪ್ರಸಿದ್ಧ ದೇವಾಲಯಗಲ್ಲಿ ಒಂದಾದ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಾಸ್ಥಾನದಿಂದ ಕೇವಲ 20 ನಿಮಿಷಗಳ ದೂರದಲ್ಲಿದೆ. ಈ ಸ್ಥಳವು ಪ್ರಕೃತಿ ಪ್ರಿಯರು, ಟ್ರಕ್ಕಿಂಗ್ ಮಾಡಲು ಬಯಸುವವರಿಗೆ ಮತ್ತು ತೀರ್ಥಯಾತ್ರೆಯ ಪ್ರಯಾಣಿಕರಿಗೆ ವಿಶ್ರಮಿಸಲು ಉತ್ತಮ ಸ್ಥಳವಾಗಿದೆ.
ಪ್ಯಾರಾಡೈಸ್ ರೆಸಾರ್ಟ್ ಪಶ್ಚಿಮ ಘಟ್ಟದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಐಷಾರಾಮಿ ರೆಸಾರ್ಟ್ ಆಗಿದೆ. ಈ ರೆಸಾರ್ಟ್‍ಗೆ ಆಗಮಿಸುವ ಅತಿಥಿಗಳು ಕೊಡಚಾದ್ರಿ ಬೆಟ್ಟದ ಸೌಂದರ್ಯವನ್ನು ವೀಕ್ಷಿಸುವುದರೊಂದಿಗೆ, ಪ್ರಶಾಂತವಾದ ಪರಿಸರದ ಮಡಿಲಿನಲ್ಲಿ ಸಂಪೂರ್ಣ ತನ್ಮಯರಾಗಿ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಬಹುದಾಗಿದೆ. ಇಲ್ಲಿ ಬೀಸುವ ತಂಗಾಳಿ, ಹಕ್ಕಿಗಳ ಕಲರವ ಮತ್ತು ಹಸಿರಿನಿಂದ ಕೂಡಿದ ವಾತಾವರಣ ಅತಿಥಿಗಳಿಗೆ ಒಂದು ಹೊಸ ಅನುಭವವನ್ನು ನೀಡುವುದರೊಂದಿಗೆ ಮನಸ್ಸಿಗೆ ಹೊಸ ಹುರುಪನ್ನು ಮೂಡಿಸುತ್ತದೆ.
ಇಲ್ಲಿಗೆ ಆಗಮಿಸುವ ವಿವಿಧ ಮಾದರಿಯ ಅಥಿಥಿಗಳಾದ ಮಕ್ಕಳು, ಪೋಷಕರು, ಯಾತ್ರಿಕರು, ಚಾರಣಿಗರಿಗೆ ಬೇಸರಗೊಳ್ಳಲು ಯಾವುದೇ ಅವಕಾಶವನ್ನು ನೀಡದೇ, ಕ್ರಿಯಾಶೀಲರಾಗಿರಲು ಯಾವುದಾದರು ಚಟುವಟಿಕೆಗಳನ್ನು ಆಯೋಜಿಸುತ್ತೇವೆ. ಪ್ಯಾರಾಡೈಸ್‍ನಲ್ಲಿ ವಿವಿಧ ಮಾದರಿಯ ಒಳಾಂಗಣ ಆಟಗಳಾದ ಟೆನ್ನಿಸ್ ಕೋರ್ಟ್, ಬಾಸ್ಕೆಟ್ ಕೋರ್ಟ್, ಸೈಕ್ಲಿಂಗ್ ಹಾಗೂ ಮುಂತಾದ ಚಟುವಟಿಕೆಗಳನ್ನು ಹೊಂದಿರುತ್ತದೆ. ಒಂದು ವೇಳೆ ನೀವು ರಜಾ ದಿನಗಳಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ಮಾಡದೇ ಕೇವಲ ವಿಶ್ರಾಂತಿಯನ್ನು ಬಯಸುವುದಾದರೆ ನಮ್ಮ ರೆಸಾರ್ಟ್‍ನಲ್ಲಿ ಸ್ನೇಹಶೀಲ ಕೊಠಡಿಗಳು ಮತ್ತು ರೆಸಾರ್ಟ್‍ನ ಸುತ್ತಮುತ್ತಲಿನ ಪರಿಸರವು ನಿಮಗೆ ಸಹಾಯಕವಾಗಿದೆ.
ನಮ್ಮ ರೆಸಾರ್ಟ್‍ನಲ್ಲಿ ಪ್ರತ್ಯೇಕ ಸಸ್ಯಹಾರಿ ಮತ್ತು ಮಾಂಸಹಾರಿ ರೆಸ್ಟೋರೆಂಟ್ ಲಭ್ಯವಿದ್ದು, ಅತಿಥಿಗಳಿಗೆ ಪ್ರೀತಿ ಮತ್ತು ಕಾಳಜಿಯಿಂದ ರುಚಿಯಾದ ಅಡುಗೆಯನ್ನು ತಯಾರಿಸಿ ನೀಡಲಾಗುವುದು.
ರೆಸಾರ್ಟ್‍ಗೆ ಆಗಮಿಸುವ ಸಸ್ಯಹಾರಿ ಅತಿಥಿಗಳಿಗೆ ಮಾಲ್ಗುಡಿ ಕೆಫೆ ಯು ದಕ್ಷಿಣ ಭಾರತದ ಅತ್ಯಂತ ರುಚಿಯಾದ ಆಹಾರವನ್ನು ತಯಾರಿಸಿ ನೀಡುತ್ತದೆ ಹಾಗೂ ಮಾಂಸಹಾರಿ ಅತಿಥಿಗಳಿಗೆ ಸೀಶೆಲ್ಸ್ ರೆಸ್ಟೋರೆಂಟ್ ನವರು ಕರಾವಳಿ ಸಮುದ್ರ ಪ್ರದೇಶದ ಮಾದರಿಯಲ್ಲಿ ಆಹಾರವನ್ನು ತಯಾರಿಸಿ ಒದಗಿಸುತ್ತದೆ. ಎಲ್ಲ ಸಮುದ್ರದ ಆಹಾರಗಳು ಮಲ್ಪೆ ಬಂದರಿನಿಂದ ಸರಬರಾಜು ಮಾಡಿಕೊಳ್ಳುವುದರಿಂದ ತಾಜಾತನವನ್ನು ಹೊಂದಿರುತ್ತದೆ.

ನೀವು ನಿಮ್ಮ ರಜಾ ದಿನಗಳನ್ನು ಪರ್ವತವಿರುವ ಭೂ ಪ್ರದೇಶಗಳಲ್ಲಿ ಕಳೆಯಲು ಬಯಸಿದರೆ, ಕರ್ನಾಟಕದ ಕೊಡಚಾದ್ರಿಯಲ್ಲಿರುವ ಸುಂದರವಾದ ಪ್ಯಾರಾಡೈಸ್ ರೇಸಾರ್ಟ್‍ಗೆ ಭೇಟಿ ನೀಡಿ. ಇದು ಬೆಂಗಳೂರಿನಿಂದ ಕೇವಲ 400 ಕಿ.ಮೀ ದೂರ ಹಾಗೂ ಉಡುಪಿಯಿಂದ ಪ್ರಯಾಣವಾಗಿದ್ದು, ಇದು ಕರ್ನಾಟಕದ ನೈಸರ್ಗಿಕ ಪರಂಪಡೆ ಮತ್ತು ಸೌಂದರ್ಯವನ್ನು ಅನ್ವೇಷಿಸುವ ಪ್ರಯಾಣಿಕರಿಗೆ ಸೂಕ್ತವಾದ ಸ್ಥಳವಾಗಿದೆ.

ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್- ಮಲ್ಪೆ ಬೀಚ್

ನಿರ್ವಹಣೆಗಾಗಿ ಪಡೆದ ಕೆ.ಎಸ್.ಟಿ.ಡಿ.ಸಿ ಯ ಆಸ್ತಿಗಳಲ್ಲಿ ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ಕರಾವಳಿ ಪ್ರದೇಶದಲ್ಲಿಯೇ ಉತ್ತಮವಾದ ರೆಸಾರ್ಟ್ ಆಗಿದ್ದು, ತಂಗಲು ಉತ್ತಮ ಸ್ಥಳವಾಗಿದೆ.
ನೀವು ಬೀಚ್ ಪ್ರೇಮಿಯಾಗಿದ್ದಲ್ಲಿ, ಈ ಪ್ರದೇಶವನ್ನು ವೀಕ್ಷಿಸಿದಲ್ಲಿ ತುಂಬಾ ಸಂಭ್ರಮಿಸುತ್ತೀರಿ. ನೀವು ನೀಲಿ ಬಣ್ಣದಲ್ಲಿ ಹೊಳೆಯುವ ಅರೇಬಿಯನ್ ಸಮುದ್ರಕ್ಕೆ ಹತ್ತಿರವಾಗುತ್ತಿದ್ದಂತೆ, ನಿಮಗೆ ಬೇರೆ ಜಗತ್ತನ್ನು ಪ್ರವೇಶಿಸಿದ ಅನುಭವ ಉಂಟಾಗಲಿದ್ದು, ಈ ಅದ್ಭುತ ಸೌಂದರ್ಯದ ಜಗತ್ತಿಗೆ ಅಂತ್ಯವಿರುವುದಿಲ್ಲ.
ಕರ್ನಾಟಕದ ಕರಾವಳಿ ಪಟ್ಟಣವಾದ ಮಲ್ಪೆ ಅದ್ಭುತ ಭೂ ದೃಶ್ಯಗಳು ಮತ್ತು ಅರೇಬಿಯನ್ ಸಮುದ್ರದ ಕರಾವಳಿಯ ನೈಸರ್ಗಿಕ ಅನುಭವವನ್ನು ಹೊಂದಿರುವ ಸ್ಥಳವಾಗಿದೆ. ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ನಿಮಗೆ ಸ್ವರ್ಗದ ಅನುಭವವನ್ನು ನೀಡುತ್ತದೆ. ಮಲ್ಪೆ ಬೀಚ್‍ನಲ್ಲಿರುವ ಬಿಳಿ ಮರಳಿನ ಉದ್ದಕ್ಕೂ ನೆಲೆಗೊಂಡಿರುವ ಈ ರೆಸಾರ್ಟ್ ಸರಳತೆ ಮತ್ತು ಸೌಕರ್ಯಗಳಿಂದ ಕೂಡಿದ ಪ್ಯಾಕೇಜ್‍ನ್ನು ಹೊಂದಿದೆ.
ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ಸಂಪೂರ್ಣ ಹವಾ ನಿಯಂತ್ರಿತ ಕೊಠಡಿಗಳನ್ನು ಹೊಂದಿದ್ದು, ಈ ಕೊಠಡಿಯಿಂದಲೇ ಸಮುದ್ರದ ಸೊಗಸಾದ ನೋಟವನ್ನು ವೀಕ್ಷಿಸಬಹುದಾಗೊದೆ. ಇದು ಬಿಸಿ ಮತ್ತು ತಣ್ಣನೆಯ ಹರಿಯುವ ನೀರು, ಇಂಟರ್‍ಕಾಮ್‍ಗಳು, ಲಾಬಿಯಲ್ಲಿ ಉಚಿತ ವೈ-ಪೈ ಸಂಪರ್ಕವನ್ನು ಹೊಂದಿದೆ ಹಾಗೂ ಭಾರದಲ್ಲಿ ಉಚಿತ ವೈ-ಪೈ ಸಂಪರ್ಕವನ್ನು ನೀಡುತ್ತಿರುವ ಏಕೈಕ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಡಲತೀರದಲ್ಲಿರುವ ಆಸ್ತಿಯು 02 ರೆಸ್ಟೋರೆಂಟ್‍ಗಳಿಗೆ ಹೆಸರುವಾಸಿಯಾಗಿದೆ:
ಒಂದು ರೆಸ್ಟೋರೆಂಟ್‍ನಲ್ಲಿ ಸಮುದ್ರ ತೀರದ ವಿಶೇಷ ಆಹಾರಗಳನ್ನು ಸ್ಥಳೀಯ ಪಾಕ ಪದ್ದತಿಯಲ್ಲಿಯೇ ತಯಾರಿಸುವ ರೆಸ್ಟೋರೆಂಟ್ ಆಗಿದ್ದು, ಇಲ್ಲಿಂದ ಮಲ್ಪೆ ಬೀಚ್‍ನ ಮೇಲಿನ ಅದ್ಭುತ ನೋಟವನ್ನು ಸವಿಯಬಹುದಾಗಿದೆ.
ಇನ್ನೊಂದು ರೆಸ್ಟೋರೆಂಟ್‍ನಲ್ಲಿ ದಕ್ಷಿಣ ಕರ್ನಾಟಕ ಮತ್ತು ಇತರೆ ಜಾಗತಿಕ ಪಾಕ ಪದ್ದತಿಗಳಾದ ಮೊಘಲೈ, ಚೈನೀಸ್ ಮತ್ತು ಕಾಂಟಿನೆಂಟಲ್, ಸೀಶೇಲ್ಸ್ ಮಾದರಿಯ ಆಹಾರವನ್ನು ತಯಾರಿಸುವ ರೆಸ್ಟೋರೆಂಟ್ ಆಗಿದ್ದು, ಸ್ಥಳೀಯ ಭಕ್ಷಗಳ ರುಚಿಯನ್ನು ಸವಿಯಲು ಅನುವು ಮಾಡಿಕೊಡುತ್ತದೆ.
ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್‍ನಲ್ಲಿ ರಜಾ ದಿನಗಳನ್ನು ಪರಿಪೂರ್ಣವಾಗಿ ಕಳೆಯಲು ಬೋಜನ ಕೂಟದ ಹಾಲ್, ಕಾನ್ವೆಷನಲ್ ಹಾಲ್, ಡಿಸ್ಕೋಥೇಕ್, ನೀರಿಗೆ ಸಂಬಂಧಿಸಿದ ಆಟಗಳು ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುತ್ತದೆ.