ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತವನ್ನು (ಕರಾಪ್ರಅನಿ) ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯದಲ್ಲಿರುವ ಒಂದು ಕಂಪನಿಯಾಗಿ 06.02.1971 ರಂದು ಸ್ಥಾಪಿಸಲಾಯಿತು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ವಸತಿ ಸೌಲಭ್ಯ ಹಾಗೂ ಸಾರಿಗೆ ಅನುಕೂಲತೆಗಳನ್ನು ಒದಗಿಸುತ್ತದೆ. ವಸತಿ ಸೌಲಭ್ಯ, ಊಟೋಪಚಾರಗಳು ಹಾಗೂ ದೋಣಿವಿಹಾರ ಅನುಕೂಲತೆಗಳನ್ನು ಒದಗಿಸುವ ಉದ್ದೇಶದಿಂದ ನಿಗಮವು ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ  18 ಮಯೂರ ಸರಣಿಯ ಹೋಟೆಲುಗಳನ್ನು 5 ಉಪಾಹಾರಗೃಹಗಳನ್ನು ಹಾಗೂ 2 ದೋಣಿ ವಿಹಾರ ಕೇಂದ್ರಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಪ್ರವಾಸಗಳು ಹಾಗೂ ಪ್ಯಾಕೇಜುಗಳನ್ನು, ಮೃಗಾಯವಿಹಾರ (ಸಫಾರಿ) ಸೇವೆಗಳು ಹಾಗೂ ಪೂರ್ವಭಾವಿಯಾಗಿ ಪಾವತಿಸಲ್ಪಡುವ (ಪ್ರೀಪೈಡ್) ಟ್ಯಾಕ್ಸಿ ಸೇವೆಗಳನ್ನು, ತನ್ನದೇ ಸ್ವಾಮ್ಯದಲ್ಲಿರುವಂತಹ ಸುಖವಿಲಾಸಿ/ಆರಾಮದಾಯಕ ಬಸ್ಸುಗಳು, ಮಿನಿ ಬಸ್ಸುಗಳು ಹಾಗೂ ಓಲ್ವೋ ಬಸ್ಸುಗಳನ್ನು ಒಳಗೊಂಡಂತೆ 52 ವಾಹನಗಳ ಜೊತೆಯಲ್ಲಿ ಕಾರ್ಯಾಚರಣೆಗೊಳಿಸುತ್ತಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಅಂತಹ ಪ್ರವಾಸಗಳನ್ನು ವಿವಿಧ ಪ್ರವಾಸಿ ಸ್ಥಳಗಳಿಗೆ ½ ದಿನದಿಂದ ಹಿಡಿದು 30 ದಿನಗಳವರೆಗಿನ ಪ್ಯಾಕೇಜು ಟ್ರಿಪ್ಪುಗಳಾಗಿ ನಡೆಸುತ್ತದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳ ಗುಂಪುಗಳಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ವಾಹನಗಳನ್ನು ಗುತ್ತಿಗೆ ಆಧಾರದ ಮೇರೆಗೆ ಒದಗಿಸುತ್ತದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ರಾಜ್ಯದ ಒಳಗೆ ಹಾಗೂ ರಾಜ್ಯದ ಹೊರಗೆ ನಡೆಯುವಂತಹ ಸಭೆಗಳು ಹಾಗೂ ಸಮಾರಂಭಗಳಿಗೆ ವಸತಿಸೌಲಭ್ಯ ಹಾಗೂ ಸಾರಿಗೆ ಮುಂತಾದ ಅನುಕೂಲತೆಗಳನ್ನೂ ಸಹ ಒದಗಿಸುತ್ತದೆ.

ಸಾರಿಗೆ ಪ್ರವಾಸ ಅನುಕೂಲತೆಗಳನ್ನು ಬೆಂಗಳೂರು, ಮೈಸೂರು, ಹೊಸಪೇಟೆ ಹಾಗೂ ಮಂಗಳೂರಿನಿಂದ ಕಾರ್ಯಾಚರಣೆಗೊಳಿಸಲಾಗುವುದು.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, 500 ಹವಾನಿಯಂತ್ರಿತ ಹಾಗೂ 100 ಹವಾನಿಯಂತ್ರಿತವಲ್ಲದ ಟ್ಯಾಕ್ಸಿಗಳೊಂದಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ನಿಯಮಿತದಿಂದ ಪೂರ್ವಭಾವಿಯಾಗಿ ಪಾವತಿಸಲ್ಪಡುವ (ಪ್ರೀಪೈಡ್) ಟ್ಯಾಕ್ಸಿ ಸೇವೆಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.

Location of KSTDC hotels

ದೂರದೃಷ್ಟಿ

ಕರ್ನಾಟಕದ ನೈಸರ್ಗಿಕವಾಗಿ ಸಂಪದ್ಭರಿತವಾದಂತಹ ಹಾಗೂ ವೈವಿಧ್ಯಮಯವಾದಂತಹ ಸಂಸ್ಕೃತಿ, ಪುರಾತನ ಸ್ಮಾರಕಗಳು ಹಾಗೂ ಸಮೃದ್ಧ-ಸಂಪದ್ಭರಿತವಾದಂತಹ ಪ್ರಕೃತಿಯ ರಮಣೀಯತೆಯನ್ನು ದೇಶೀಯ ಹಾಗೂ ಅಲ್ಲದೆಯೇ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಆಕರ್ಷಕ ರೀತಿಯಲ್ಲಿ ಪ್ರದರ್ಶಿಸುವ ಸಲುವಾಗಿ, ಊರ್ಜಿತಗೊಳ್ಳಬಲ್ಲಂತಹ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ಮೂಲಕ ಸುರಕ್ಷತೆಯ, ಆರಾಮದಾಯಕ ಹಾಗೂ ಸ್ಮರಣಾರ್ಹ ಪ್ರವಾಸವನ್ನು ಖಚಿತಪಡಿಸಿಕೊಳ್ಳುವುದು.