ಹೋಟೆಲ್ ಬುಕ್ಕಿಂಗ್‍ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
- ಚೆಕ್ ಇನ್ ಸಮಯ ಮಧ್ಯಾಹ್ನ 1.00 ಗಂಟೆ. ಸದರಿ ಸಮಯಕ್ಕಿಂತ ಮುಂಚೆ ಚೆಕ್ ಇನ್ ಮಾಡಲು ಬಯಸುವ ಮನವಿಯನ್ನು ಲಭ್ಯತೆಗನುಗುಣವಾಗಿ ಪರಿಗಣಿಸಲಾಗುವುದು.
- ಚೆಕ್ ಔಟ್ ಸಮಯ ಬೆಳಿಗ್ಗೆ 11.00 ಗಂಟೆ.
- ಬುಕ್ಕಿಂಗ್‍ಗಳಲ್ಲಿ ಒಮ್ಮೆ ಮಾತ್ರ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದ್ದು, ಕನಿಷ್ಠ ಚೆಕ್ ಇನ್ ದಿನಾಂಕದ 24.00 ಗಂಟೆಗಳ ಮೊದಲು ತಿದ್ದಪಡಿ ಮಾಡಲು ಅವಕಾಶವಿರುತ್ತದೆ.
ದಯವಿಟ್ಟು ಗಮನಿಸಿ: ಬುಕ್ಕಿಂಗ್‍ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್‍ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
- ಸುಂಕವು ತೆರಿಗಳನ್ನು ಹೊರತುಪಡಿಸಿರುತ್ತದೆ.
- ಪ್ರದರ್ಶಿತ ದರಗಳು ಮೂಲ ದರಗಳಾಗಿರುತ್ತವೆ (ಜಿ.ಎಸ್.ಟಿ. ಹೆಚ್ಚುವರಿಯಾಗಿರುತ್ತದೆ).
- ಕಾಲೋಚಿತ ಹೆಚ್ವಳವು ಮೂಲ ಸುಂಕದ ಮೇಲೆ ಇರುತ್ತದೆ.
- ಚಕ್ ಇನ್ ದಿನದಂದು ಹೆಚ್ಚುವರಿಯಾಗಿ ಹಾಸಿಗೆ ಪಡೆದಲ್ಲಿ ಅಥವಾ ಹೆಚ್ಚುವರಿ ವ್ಯಕ್ತಿ ಇದ್ದಲ್ಲಿ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತದೆ.
- ಷರತ್ತು ಮತ್ತು ನಿಯಮಗಳನ್ನೊಳಪಟ್ಟು, ಚೆಕ್ ಇನ್ ದಿನಾಂಕದಂದು ಹೋಟೆಲ್‍ನಲ್ಲಿಯೇ ಪಾವತಿಸುವ ಆಯ್ಕೆ ಸಹ ಲಭ್ಯವಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
- 07 ದಿನಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ, ಪೂರ್ಣ ಮೊತ್ತವನ್ನು ಮರುಪಾವತಿ ಮಾಡಲಾಗುವುದು.
- 07 ದಿನಗಳೊಳಗೆ ಅಥವಾ 48 ಗಂಟೆಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ 25% ಮೊತ್ತವನ್ನು ಕಡಿತಗೊಳಿಸಿ, ಪಾವತಿಸಲಾಗುವುದು.
- ಚೆಕ್ ಇನ್ ದಿನಾಂಕದ 24 ಗಂಟೆಗಳೊಳಗೆ ಬುಕ್ಕಿಂಗ್ ರದ್ದುಪಡಿಸಿದ್ದಲ್ಲಿ ಯಾವುದೇ ಮರುಪಾವತಿ ಮಾಡಲಾಗುವುದಿಲ್ಲ.
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.
- 24 ಗಂಟೆಗಳ ಮುಂಚಿತವಾಗಿ ರದ್ದುಪಡಿಸಿದಲ್ಲಿ, ಯಾವುದೇ ರದ್ದತಿ ಶುಲ್ಕಗಳಿರುವುದಿಲ್ಲ
- 24 ಗಂಟೆಗಳೊಳಗಾಗಿ ರದ್ದುಪಡಿಸಿದಲ್ಲಿ, ಯಾವುದೇ ಮರುಪಾವತಿ ಇರುವುದಿಲ್ಲ.