ಹೆಚ್ಚಿನ ಒತ್ತಡದಲ್ಲಿರುವವರು ವಿಶ್ರಾಂತಿಯನ್ನು ಪಡೆಯಲು ಹೊಸ ಜಾಗಕ್ಕೆ ತೆರಳಲು ಇಚ್ಛಿಸಿದರೆ, ಬೇಲೂರಿಗೆ ಪ್ರಯಾಣಿಸಬಹುದಾಗಿದೆ. ಏಕೆಂದರೆ, ಬೇಲೂರು ಉತ್ತಮವಾದ ಪ್ರಕೃತಿಕ ಸೌಂದರ್ಯವನ್ನು ಹೊಂದಿದೆ ಹಾಗೂ ಹೊಯ್ಸಳ ರಾಜವಂಶದ ರಾಜಧಾನಿಗಳಲ್ಲಿ ಒಂದಾದ ಬೇಲೂರು ಭವ್ಯವಾದ ಹೊಯ್ಸಳ ದೇವಾಲಯದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಬೇಲೂರಿನ ದೇವಾಲಯಗಳು ಅದರ ಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಚನ್ನಕೇಶವ ದೇವಸ್ಥಾನವು ಹೊಯ್ಸಳ ರಾಜ ವಿಷ್ಣುವರ್ಧನ ಕಾಲದಲ್ಲಿ ನಿರ್ಮಾಣಗೊಂಡಿರುತ್ತದೆ. ವೀರನಾರಾಯಣ ದೇವಸ್ಥಾನ, ಶ್ರೀದೇವಿ ದೇವಸ್ಥಾನ ಹಾಗೂ ಭೂದೇವಿ ದೇವಸ್ಥಾನಗಳು ದಕ್ಷಿಣ ಭಾರತದ ಭವ್ಯತೆಯ ಕಥೆಗಳನ್ನು ವಿವರಿಸುತ್ತದೆ.
ಹೋಟೆಲ್ ಮಯೂರ ವೇಲಾಪುರಿ ಬೇಲೂರು ಘಟಕಕ್ಕೆ ದೇವಾಲಯದ ಸಂಕೀರ್ಣದಿಂದ ಕಾಲುದಾರಿಯಲ್ಲಿ 05 ನಿಮಿಷದಲ್ಲಿ ತೆರಳಬಹುದಾಗಿದೆ ಮತ್ತು ದೇವಾಲಯಗಳ ಸೌಂದರ್ಯವನ್ನು ಆರಾಧಿಸುವವರಿಗೆ ಹೆಚ್ಚು ಸಮಯ ಕಳೆಯಲು ಬಯಸುವವರಿಗೆ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಹೋಟೆಲ್ ಘಟಕವು 14 ಹವಾ ನಿಯತ್ರಿತ ಕೊಠಡಿ ಮತ್ತು ಹವಾ ರಹಿತ ಕೊಠಡಿಗಳನ್ನು ಹಾಗೂ 02 ವಸತಿ ನಿಲಯಗಳನ್ನು ಹೊಂದಿರುವುದರೊಂದಿಗೆ, ರೆಸ್ಟೋರೆಂಟ್ ಮತ್ತು ಬಾರ್‍ನ್ನು ಹೊಂದಿರುತ್ತದೆ.
ಸೂಚನೆ:
ಹೋಟೆಲ್ ಬುಕ್ಕಿಂಗ್‍ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
ದಯವಿಟ್ಟು ಗಮನಿಸಿ: ಬುಕ್ಕಿಂಗ್‍ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್‍ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.