• img
  • img
  • img
  • img

ಕೆ.ಎಸ್‌.ಟಿ.ಡಿ.ಸಿ ವಿಮಾನ ಟ್ಯಾಕ್ಸಿಗಳು

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

ದೂರವಾಣಿ: 080 – 4466 4466

ಇಮೇಲ್: [email protected]

ಕೆ.ಎಸ್.ಟಿ.ಡಿ.ಸಿ ವಿಮಾನ ನಿಲ್ದಾಣ ಟ್ಯಾಕ್ಸಿಗಳು ಮತ್ತು ಕ್ಯಾಬ್ಸ್ ಅಪ್ಲಿಕೇಶನ್ ನ್ನು ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕರ್ನಾಟಕದಲ್ಲಿ ಪ್ರವಾಸ ನಿರ್ವಹಣೆಯಲ್ಲಿ ಅತ್ಯಂತ ದೊಡ್ಡ ಸಂಘಟನಾ ಸಂಸ್ಥೆಯಾಗಿದೆ. ಕರ್ನಾಟಕದಲ್ಲಿನ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಕೆ.ಎಸ್.ಟಿ.ಡಿ.ಸಿ ಯು ಉತ್ತಮ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪ್ರವಾಸಿಗರು ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಏರ್‍ಪೋರ್ಟ್‍ನಿಂದ ಆಗಮಿಸುವ ಪ್ರವಾಸಿಗರಿಗೆ ನಗರ ಪ್ರದೇಶಕ್ಕೆ ತೆರಳಲು, ವಿರಳ ಸ್ಥಳಗಳಲ್ಲಿ ಹೋಟೆಲ್‍ಗಳು ಅಥವಾ ರೆಸ್ಟೋರೆಂಟ್‍ಗಳನ್ನು ಹುಡುಕಲು ಕೆ.ಎಸ್.ಟಿ.ಡಿ.ಸಿ ಯ ವಿಮಾನ ನಿಲ್ದಾಣದ ಟ್ಯಾಕ್ಸಿಗಳ ಕೊಡುಗೆ ಅಪಾರವಾದದ್ದು. ಎಲ್ಲಾ ಕೆ.ಎಸ್.ಟಿ.ಡಿ.ಸಿ ವಿಮಾನ ನಿಲ್ದಾಣ ಟ್ಯಾಕ್ಸಿಗಳು ಅತ್ಯಾಧುನಿಕ ತಂತ್ರಜ್ಞಾನದ ಜಿಪಿಎಸ್, ಜಿ.ಪಿ.ಆರ್.ಎಸ್ ಮತ್ತು ಮುದ್ರಣ ಯಂತ್ರಗಳೊಂದಿಗೆ ಅಳವಡಿಸಲ್ಪಟ್ಟಿದ್ದು, ಇದು ಪ್ರಯಾಣಿಸುವ ಸಂದರ್ಭದಲ್ಲಿ ಟ್ರ್ಯಾಕಿಂಗ್ ಮಾಡಲು, ತ್ವರಿತ ಮತ್ತು ಪಾರದರ್ಶನ ಬಿಲ್ಲಿಂಗ್ ಅನ್ನು ಸಕ್ರಿಯಗೊಳಿಸಲು ಸಹಾಯಕಾರಿಯಾಗಿದೆ.  ಈ ಕುರಿತಂತೆ ಸಂಕ್ಷೀಪ್ತವಾಗಿ ಹೇಳುವುದಾದರೆ, ಭಾರತದ ಅತ್ಯುತ್ತಮ ಪ್ರವಾಸಿ ತಾಣಕ್ಕೆ ಪ್ರವಾಸಿಗರು ನಿರೀಕ್ಷಿಸುವ ಸೌಲಭ್ಯವನ್ನು ಕೆ.ಎಸ್.ಟಿ.ಡಿ.ಸಿ ಯು ಒದಗಿಸುತ್ತಿದೆ.

ವಿಮಾನ ನಿಲ್ದಾಣ ಟ್ಯಾಕ್ಸಿಗಳ ದರದ ವಿವರಗಳು

ಫ್ಲ್ಯಾಗ್ ಡೌನ್ ಶುಲ್ಕ (ಮೊದಲ 4 ಕಿ.ಮೀ)- ಎಸಿ ಮತ್ತು ಮಹಿಳಾ ಟ್ಯಾಕ್ಸಿಗೆ ರೂ.100 ಮತ್ತು ನಾನ್ ಎಸಿ ಟ್ಯಾಕ್ಸಿಗಳಿಗೆ ರೂ.75.

ಪ್ರತಿ ಕಿಲೋಮೀಟರ್ ದರ: ಎಸಿ ಮತ್ತು ಪಿಂಕ್ ಕ್ಯಾಬ್‌ಗಳಿಗೆ ರೂ. 24 ಮತ್ತು ನಾನ್ ಎಸಿಗೆ ರೂ.18.

ಕಾಯುವ ಶುಲ್ಕಗಳು: ಮೊದಲ 5 ನಿಮಿಷಗಳವರೆಗೆ ಯಾವುದೇ ಶುಲ್ಕವಿಲ್ಲ ತದನಂತರ ಪ್ರತಿ ನಿಮಿಷಕ್ಕೆ ರೂ.1 ವಿಧಿಸಲಾಗುವುದು.

ಲಗೇಜ್ ಶುಲ್ಕಗಳು: 120 ಕೆಜಿಯವರೆಗಿನ ಲಗೇಜ್ ಗೆ ಯಾವುದೇ ಶುಲ್ಕವಿಲ್ಲ ತದನಂತರ ಪ್ರತಿ ಹೆಚ್ಚಿನ ಲಗೇಜ್‌ಗೆ ರೂ.7 ವಿಧಿಸಲಾಗುತ್ತದೆ.

ಪ್ರಯಾಣದ ಶುಲ್ಕಗಳು: ಎಸಿ ಟ್ಯಾಕ್ಸಿಗಳಿಗೆ ರೂ.118, ನಾನ್ ಎಸಿ ಟ್ಯಾಕ್ಸಿಗಳಿಗೆ ರೂ.69 ಮತ್ತು ಮಹಿಳಾ ಟ್ಯಾಕ್ಸಿಗಳಿಗೆ ರೂ.71

ಟೋಲ್ ಶುಲ್ಕಗಳು : ರೂ.110

ರಾತ್ರಿ ದರದ ಶುಲ್ಕಗಳು (12:00 am ನಿಂದ 06:00 am): ಪ್ರತಿ ಕಿಲೋಮೀಟರ್‌ಗೆ ನಿಗದಿಪಡಿಸಿರುವ ಶುಲ್ಕದ ಮೇಲೆ 10% ಹೆಚ್ಚಿಸಲಾಗುತ್ತದೆ.

ಪ್ರಯಾಣಿಕರು ತಮ್ಮ ಪ್ರಯಾಣದ ಕೊನೆಯಲ್ಲಿ ತಮ್ಮ ಪಾವತಿಯನ್ನು ಮಾಡಬೇಕು ಮತ್ತು ಮುದ್ರಿತ ಎಲೆಕ್ಟ್ರಾನಿಕ್ ರಶೀದಿಯನ್ನು ಸಂಗ್ರಹಿಸಬೇಕು.

ಪಾವತಿಯನ್ನು ನಗದು/ ಆನ್ ಲೈನ್‌ ಮೂಲಕ ಮಾಡಬಹುದು.

ಪ್ರಯಾಣದ ದೂರವನ್ನು ಆಧರಿಸಿ ದರಗಳನ್ನು ವಿಧಿಸಲಾಗುತ್ತದೆ