• img
  • img
  • img
  • img

ಮಯೂರ ಹೋಟೆಲ್‍ಗಳು

ಉನ್ನತ , ಸೊಗಸಾದ

ಅತ್ಯಂತ ಅತಿರಂಜಿತ ಹೋಟೆಲ್ ಅನುಭವಕ್ಕಾಗಿ ಮಯೂರ ಹೋಟೆಲ್ಸ್‍ಗಳಿಗೆ ಭೇಟಿ ನೀಡಬಹುದು. ಪ್ರತಿ ಅತಿಥಿ, ಕುಟುಂಬ ಹಾಗೂ ಸ್ನೇಹಿತರ ಗುಂಪಿಗೆ ಐಶಾರಾಮಿ ಕೊಠಡಿ, ಉತ್ತಮ ಆತಿಥ್ಯ ಮತ್ತು ಸ್ವಾದಿಷ್ಟ ಪಾಕಪದ್ಧತಿಯನ್ನು ಕರ್ನಾಟಕದಾದ್ಯಂತ ನೀಡುತ್ತಿದೆ.
ಕರ್ನಾಟಕಕ್ಕೆ ಪ್ರವಾಸ ಕೈಗೊಳ್ಳುವ ಯೋಜನೆ ಇದೆಯೇ?

ನಿಮ್ಮ ರಜಾ ದಿನಗಳನ್ನು ಆನಂದಿಸಿ, ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ.

ಪ್ರೀಮಿಯಂ ಹೋಟೆಲ್‌ಗಳು

  • ಹೋಟೆಲ್ ಮಯೂರ ಪೈನ್ ಟಾಪ್, ನಂದಿ ಬೆಟ್ಟ
  • ಹೋಟೆಲ್ ಮಯೂರ ವ್ಯಾಲಿ ವ್ಯೂ ಮಡಿಕೇರಿ
  • (English) Mayura Phalguni River Resort, Pilikula
  • Hotel Myura Royal Heritage-Ooty
  • ಕುಮಾರಕೃಪ ಹೋಟೆಲ್
  • ಹೋಟೆಲ್ ಮಯೂರ ಕೃಷ್ಣ ಆಲಮಟ್ಟಿ
  • ಹೋಟೆಲ್ ಮಯೂರ ರಿವರ್ ವೆವ್
  • ಹೋಟೆಲ್ ಮಯೂರ ಭುವೇಶ್ವರಿ, ಹಂಪಿ
  • ಹೋಟೆಲ್ ಮಯೂರ ಆದಿಲ್ ಷಾಹಿ ವಿಜಯಪುರ
  • ಹೋಟೆಲ್ ಮಯೂರ ಸುದರ್ಶನ , ಊಟಿ
  • ಹೋಟೆಲ್ ಮಯೂರ ಹೊಯ್ಸಳ ಮೈಸೂರು

ಹೋಟೆಲ್ ಮಯೂರ ಪೈನ್ ಟಾಪ್, ನಂದಿ ಬೆಟ್ಟ

ನಂದಿಬೆಟ್ಟ, ಚಿಕ್ಕಬಳ್ಳಾಪುರ

ಶ್ರೀ ಮನೋಜ್ ಕುಮಾರ್ - 8618799919, 8618799918

8618799918 , 8618799919

[email protected]

ಆಶ್ಚರ್ಯಕರ ನೋಟಗಳು, ಮನಸ್ಸಿಗೆ ಮುದ ನೀಡುವ ಹಾಗೂ ವಾಸ್ತವಿಕವಾದ ಅನುಭವಗಳಿಂದ ಆವೃತವಾಗಿರುವ ನಂದಿ ಬೆಟ್ಟ ಸ್ಥಳವು ಸ್ವರ್ಗದಂತೆ ಭಾಸವಾಗುತ್ತದೆ ಮತ್ತು ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಅತ್ಯುತ್ತಮ ಸ್ಥಳವಾಗಿದೆ.
ನಂದಿ ಬೆಟ್ಟವು ನಗರದ ಸ್ವಂತ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಕೇವಲ 60 ಕಿ.ಮೀ. ದೂರದಲ್ಲಿರುತ್ತದೆ.
ಸಮುದ್ರ ಮಟ್ಟದಿಂದ 1455 ಮೀಟರ್ ಎತ್ತರದಲ್ಲಿರುವ ಈ ಪ್ರದೇಶವು ಪ್ರಶಾಂತ ವಾತಾವರಣ ಮತ್ತು ತಾಜಾ ಗಾಳಿಯನ್ನು ನೀಡುವ ತಾಣವಾಗಿದ್ದು, ಬೇಸಿಗೆ ತಾಪ ಕಳೆಯಲು ಟಿಪ್ಪು ಸುಲ್ತಾನ ಮತ್ತು ಬ್ರಿಟಿಷರು ಈ ಸ್ಥಳವನ್ನು ಬಳಸುತ್ತಿದ್ದರು.
ನಂದಿ ಬೆಟ್ಟವು ಒಂದು ಪರಿಪೂರ್ಣ ಹಾಗೂ ಧೀರ್ಘ ಮನೋಲ್ಲಾಸ ತಾಣವಾಗಿದ್ದು, ಸಾಹಸಪ್ರಿಯರಿಗೆ ಉತ್ತಮ ಸ್ಥಳವಾಗಿದೆ. ಸದರಿ ಸ್ಥಳ ಎರಡು ಪ್ರಾಚೀನ ಶಿವನ ದೇವಾಲಯಗಳನ್ನು ಹೊಂದಿದ್ದು, ಒಂದು ದೇವಾಲಯವು ಬೆಟ್ಟದ ಪಾದದಲ್ಲಿ ಮತ್ತು ಇನ್ನೊಂದು ದೇವಾಲಯವು ಶಿಖರದಲ್ಲಿದ್ದು, ಬೆಟ್ಟಕ್ಕೆ ಆಕರ್ಷಕವಾಗಿದೆ.

ಹೋಟೆಲ್ ಮಯೂರ ನಂದಿಬೆಟ್ಟವು, ಬೆಟ್ಟದ ಶಿಖರದಲ್ಲಿ 17 ಕೊಠಡಿಗಳ ವಸತಿ ಗೃಹ, ಡಿಲೆಕ್ಸ್ ರೂಮ್ (ಗಾಂಧೀ ನಿಲಯ), ಡಬಲ್ ರೂಮ್ (ಗಾಂಧಿ ನಿಲಯ ನ್ಯೂ ಬ್ಲಾಕ್) ಹೊಂದಿದೆ. ಅಲ್ಲದೇ, ಭೇಟಿ ನೀಡುವ ಪ್ರವಾಸಿಗರಿಗೆ ಉತ್ತಮ ರೆಸ್ಟೋರೆಂಟ್ ವ್ಯವಸ್ಥೆಯನ್ನು ಹೊಂದಿರುತ್ತದೆ.

ಸೂಚನೆ: ಸಂಜೆ 6.00 ಗಂಟೆಯೊಳಗೆ ಚೆಕ್ ಇನ್ ಆಗಬೇಕಾಗಿರುತ್ತದೆ.

ಹೋಟೆಲ್ ಮಯೂರ ವ್ಯಾಲಿ ವ್ಯೂ ಮಡಿಕೇರಿ

ರಾಜ ಶೀಟ್ ಹತ್ತಿರ, ಮಡಿಕೇರಿ-571 201

ಶ್ರೀ ರಿಜ್ವಾನ್ ಅಹ್ಮದ್ +918970650028

08272-228387

[email protected]

ಮಾಲಿನ್ಯ ಹಾಗೂ ಅವ್ಯವಸ್ಥೆಯಿಂದ ದೂರು ಉಳಿದಿರುವ ಪ್ರದೇಶವೆಂದರೆ ಮಡಿಕೇರಿ. ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಸ್ವರ್ಗದಂತೆ ಭಾಸವಾಗುವುದಲ್ಲದೇ ಪ್ರಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ.

ಯಾವುದೇ ಕಾಲಮಾನದಲ್ಲಿ ಭೇಟಿ ನೀಡಿದರೂ ಉತ್ತಮ ಅನುಭವ ನೀಡುತ್ತದೆ. ದಟ್ಟವಾದ ಅರಣ್ಯದ ಲವ್ಲಿ ಗಿರಿದಾಮದಲ್ಲಿ ಮಡಿಕೇರಿ ನೆಲೆಸಿದ್ದು, ಉತ್ತಮ ಕಾಫೀ ತೋಟ ಮತ್ತು ಆಶ್ವರ್ಯಕರ ಜಲಪಾತವನ್ನೊಳಗೊಂಡ ಮಡಿಕೇರಿಯು ತನ್ನ ಸಾಂಪ್ರದಾಯಕ ರುಚಿಯ ಪಾಕಪದ್ದತಿಯನ್ನು ಹೊಂದಿದೆ. ಕೊಡಗು ಜಿಲ್ಲೆಯ ಆಕರ್ಷಕ ರಾಜಧಾನಿಯಾದಂತಹ ಮಡಿಕೇರಿಯು ಪ್ರಾಚೀನ ಕಾಲದ ಆಕರ್ಷಕ ನೋಟವನ್ನು ಹೊಂದಿದೆ ಹಾಗೂ ರೆಡ್ ರೂಫಡ್ ಗುಂಪು ಸಮುದಾಯ ಮತ್ತು ಉತ್ತಮ ಮಾರುಕಟ್ಟೆಯನ್ನು ಸಹ ಹೊಂದಿದೆ.
ಮಡಿಕೇರಿಯು ಸಾಕಷ್ಟು ಪಿಕ್ನಿಕ್ ಸ್ಥಳಗಳನ್ನು ಒದಗಿಸುದಲ್ಲದೇ, ಕೆಲವೊಂದು ಆಸಕ್ತÀ ಚಟುವಟಿಕೆಗಳಾದ ಟ್ರಕ್ಕಿಂಗ್, ಬೆಟ್ಟ ಹತ್ತುವುದು ಹಾಗೂ ನದಿಯಲ್ಲಿನ ದೋಣಿ ವಿಹಾರ ಇತ್ಯಾದಿಗಳನ್ನು ಸಹ ಒದಗಿಸುತ್ತದೆ.
ಮಡಿಕೇರಿ ಬೆಟ್ಟದ ಅಂಚಿನಲ್ಲಿರುವ ಹೋಟೆಲ್ ಮಯೂರ ವ್ಯಾಲಿ ವ್ಯೂ ಮಡಿಕೇರಿ ಘಟಕವು ಸದರಿ ಸ್ಥಳದ ಆಕರ್ಷಕ ನೋಟವನ್ನು ಸವಿಯಲು ಉತ್ತಮ ಸ್ಥಳವಾಗಿದೆ.
ವ್ಯಾಲಿ ವ್ಯೂ ಮಡಿಕೇರಿ ಹೋಟೆಲ್ ಒಟ್ಟು 36 ಹವಾ ನಿಯಂತ್ರಿತ ಕೊಠಡಿಗಳು ಮತ್ತು ಉತ್ತಮ ದರ್ಜೆಯ ಡಬಲ್ ಬೆಡ್ ಕೊಠಡಿಗಳನ್ನು ಹೊಂದಿದೆ. ಬಾರ್ ವ್ಯವಸ್ಥೆಯನ್ನೊಳಗೊಂಡ ರೆಸ್ಟೋರೆಂಟ್ ಹೊಂದಿದ್ದು, ಕೊಡಗು ಶೈಲಿಯ ಪಾಕಪದ್ಧತಿಯನ್ನು ಅಳವಡಿಸಲಾಗಿರುತ್ತದೆ. ಅಲ್ಲದೇ, ಘಟಕಕ್ಕೆ ಬರುವ ಪ್ರವಾಸಿಗರಿಗೆ ಮಡಿಕೇರಿ ಸುತ್ತಮುತ್ತಲಿನ ಸ್ಥಳ ವೀಕ್ಷಣೆಯ ಸೌಲಭ್ಯವನ್ನು ಹೊಂದಿದ್ದು, ಉತ್ತಮ ಸವಿನೆನಪುಗಳನ್ನು ಕಲೆಹಾಕಬಹುದು.

(English) Mayura Phalguni River Resort, Pilikula

(English) Dr. Shivarama Karantha Nisargadhama, Moodushedde Vamanjur, Mangaluru 575028

(English) Mr. Kevin Oscar Dsouza

(English) 8050954834

(English) [email protected]

Sorry, this entry is only available in English.

Hotel Myura Royal Heritage-Ooty

ಫರ್ನ್ ಹಿಲ್, ಊಟಿ-643004, ತಮಿಳುನಾಡು

ಶ್ರೀ ಕಾರ್ತಿಕ್ ಸಂತೋಷ್ 8970650052

0423-2443828

[email protected]

ಊಟಿ ಪ್ರದೇಶದ ಸೌಂದರ್ಯವು ಒಂದು ಸಮ್ಮೋಹನ ಅನುಭವವಾಗಿರುತ್ತದೆ. ಮಾನ್ಸೂನ್ ಸಮಯದಲ್ಲಿ ಒಂದು ಮಾಯಾಲೋಕದಂತೆ ರೂಪುಗೊಳ್ಳುವ ಗಿರಿದಾಮವು ಹೆಚ್ಚಿನ ಸಮಯ ಇರುವಂತೆ ಪ್ರೇರೆಪಿಸುತ್ತದೆ.
ಮೈಸೂರಿನಿಂದ ಕೇವಲ 03 ಗಂಟೆಗಳ ಪ್ರಯಾಣವಿರುವ ಊಟಿ ಪ್ರದೇಶವು ತಮಿಳುನಾಡಿನಲ್ಲಿದ್ದು, ರಜಾ ದಿನಗಳನ್ನು ಕಳೆಯುವವರಿಗೆ, ಅಲೆದಾಡಲು ಬಯಸುವವರಿಗೆ ಹಾಗೂ ನಗರ ಜೀವನದಿಂದ ಬೇಸತ್ತು ವಿಶ್ರಾಂತಿ ಪಡೆಯಬಯಸುವವರಿಗೆ ಊಟಿ ಜನಪ್ರಿಯ ಸ್ಥಳವಾಗಿರುತ್ತದೆ. ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಊಟಿ ಪ್ರದೇಶವು ಸುಂದರವಾದ ಸರೋವರ, ಜಲಪಾತ, ವಿಶಾಲವಾದ ಸಸ್ಯ ಉದ್ಯಾನವನ, ಅಚ್ಚಹಸಿರಿನ ಅರಣ್ಯ ಹಾಗೂ ಕಣಿವೆಗಳನ್ನು ಒಳಗೊಂಡಿದೆ.
ಹೋಟೆಲ್ ಮಯೂರ ಸುದರ್ಶನ ಊಟಿ ಘಟಕವು ಸುಂದರವಾದ ಹಸಿರು ಪರಿಸರ ಹೊಂದಿದ ಫರ್ನ್ ಬೆಟ್ಟದಲ್ಲಿದ್ದು, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುತ್ತದೆ. ಹೋಟೆಲ್‍ನಲ್ಲಿ ಒಟ್ಟು 03 ಮರದ ಕುಟೀರಗಳು, 02 ಹವಾನಿಯಂತ್ರಿತವಲ್ಲದ ಕೊಠಡಿಗಳು ಹಾಗೂ 20 ಹವಾನಿಯಂತ್ರಿತವಲ್ಲದ ಡಿಲೆಕ್ಸ್ ಬೆಡ್ ರೂಮ್‍ಗಳ ಇರುತ್ತವೆ.
ಅಲ್ಲದೇ, ಉತ್ತಮ ರೆಸ್ಟೋರೆಂಟ್ ಸೌಲಭ್ಯವಿದ್ದು, ಊಟಿ ಶೈಲಿಯ ಪಾಕಪದ್ಧತಿ ಹೊಂದಿರುತ್ತದೆ.
ಮುಂದಿನ ಬಾರಿ ಪ್ರವಾಸ ಕೈಗೊಳ್ಳುವ ಮನಸ್ಸಾದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

 

ಕುಮಾರಕೃಪ ಹೋಟೆಲ್

ಹೊಸ ಕುಮಾರಕೃಪ ಅತಿಥಿ ಗೃಹ ಕುಮಾರಕೃಪ ರಸ್ತೆ, ಬೆಂಗಳೂರು -560001.

ಶ್ರೀ ಕಾತಿ೯ಕ್‌ ಸಂತೋಷ್ 8792919207

080-22259404/05/06/07

[email protected]

ಹೊಸ ಕುಮಾರಕೃಪಾ ಅತಿಥಿಗೃಹವು ಬೆಂಗಳೂರು ನಗರದ ಮಧ್ಯದಲ್ಲಿದ್ದು, ಇದು 18 ರಂಧ್ರಗಳ ಗಾಲ್ಫ್ ಕೋರ್ಸ್‍ನ ಪಕ್ಕದಲ್ಲಿದೆ. ಹೊಸ ಕುಮಾರಕೃಪಾ ಅತಿಥಿಗೃಹವು ಇಸಿಬಿಎ ಸೇರಿದಂತೆ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುತ್ತದೆ. ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು ಕಟ್ಟಡ ಕ್ಷೇತ್ರದಲ್ಲಿ ಇಂಧನ ದಕ್ಷತೆಯನ್ನು ಉತ್ತೇಜಿಸಲು ಮೊದಲ ಹೆಜ್ಜೆಯಾಗಿ ಶಕ್ತಿ ಸಂರಕ್ಷಣಾ ಕಟ್ಟಡ ಕೋಡ್ (ಇಸಿಬಿಸಿ) ಅನ್ನು 2007ರ ಮೇ ತಿಂಗಳಿನಲ್ಲಿ ಪ್ರಾರಂಭಿಸಲಾಯಿತು ಮತ್ತು ಕುಮಾರಕೃಪಾ ಅತಿಥಿಗೃಹ ಹೊಸ ಕಟ್ಟಡವು ಕರ್ನಾಟಕದಲ್ಲಿ ಈ ವೈಶಿಷ್ಟ್ಯವನ್ನು ಮೊದಲನೆಯದಾಗಿ ಅಳವಡಿಸಿಕೊಂಡಿದೆ. ಸಂಪೂರ್ಣ ಅತಿಥಿಗೃಹದಲ್ಲಿ ಸಂವೇದಕ ಎಲ್.ಇ.ಡಿ ಲೈಟ್ಸ್ ಗಳನ್ನು ಹಾಗೂ ಉಷ್ಣಾಂಶ ಮತ್ತು ಶೀತಲತೆಯು ತಾಪಮಾನವನ್ನು ಸರಿದೂಗಿಸಲು ವೆರಿಯೇಬಲ್ ರೆಫ್ರಿಜರೇಟರ್ ಪ್ಲೋ ವನ್ನು ಅಳವಡಿಸಲಾಗಿರುತ್ತದೆ.
ಅತಿಥಿಗೃಹವು ಡಿಲಾಕ್ಸ್ ರೂಮ್‍ಗಳನ್ನು ಹೊಂದಿದ್ದು, ವಿಶಾಲವಾದ ಮಲಗುವ ಕೋಣೆ ಮತ್ತು ಸ್ನಾನಗೃಹವನ್ನು ಹೊಂದಿದ್ದು, ಎಲ್.ಇ.ಡಿ ಟಿ.ವಿ, ಕೇಂದ್ರೀಕೃತ ಎ.ಸಿಯೊಂದಿಗೆ ಬಿಸಿ ನೀರಿನ ವ್ಯವಸ್ಥೆಗೆ ಸೋಲಾರ್ ಹಾಗೂ ಹೀಟ್ ಪಂಪ್‍ನ್ನು ಅಳವಡಿಸಲಾಗಿರುತ್ತದೆ. 24 ಗಂಟೆಗಳ ಸ್ವಾಗತ ಕೌಂಟರ್, ರೆಸ್ಟೋರೆಂಟ್, ಕೊಠಡಿ ಸೇವೆಯೊಂದಿಗೆ ಜಿಮ್, ಗ್ರಂಥಾಲಯ, ವ್ಯಾಪಾರ ಕೇಂದ್ರ, ಪತ್ರಿಕೆಗಳು, ಟಿ.ವಿ ಚಾನೆಲ್‍ಗಳು, ವೇಕಪ್ ಕರೆ, ವಾಹನಗಳ ಪಾರ್ಕಿಂಗ್, ಹೌಸ್‍ಕೀಪಿಂಗ್ ಸೇವೆ, ಲಾಂಡ್ರಿ ಸೇವೆ, ವೈದ್ಯಕೀಯ ವ್ಯವಸ್ಥೆ, ವೀಲ್ ಚೇರ್, ವೈಟಿಂಗ್ ಲಾಂಗ್, ಗಾರ್ಡನ್ ಗಳ ಸೌಲಭ್ಯವನ್ನು ಹೊಂದಿರುತ್ತದೆ.

ಹೋಟೆಲ್ ಮಯೂರ ಕೃಷ್ಣ ಆಲಮಟ್ಟಿ

(English) Inside Almatti Dam , Sitimani Camp , Rampura Post - 587207, Bagalkot Taluk and District

ಊಮೇಶ್‌ ರಾಥೋಡ್

(English) 6366947810

(English) [email protected]

Sorry, this entry is only available in English.

ಹೋಟೆಲ್ ಮಯೂರ ರಿವರ್ ವೆವ್

ಮೈಸೂರು ರಸ್ತೆ, ಶ್ರೀರಂಗಪಟ್ಟಣ, ಮಂಡ್ಯ-571438

ಶ್ರೀ ಶ್ರೇಯಸ್ 8970650004

0823-6297114

[email protected]

Srirangapatna, the land of brave kings, remarkable history and spectacular architecture, is an island town celebrated for its ancient Ranganathaswamy Temple and the Gumbaz, where Tipu Sultan and his father Hyder Ali are buried. However, the former capital of the Maharajas of Mysuru is not just about palaces, forts, dungeons and mosques, rather its verdant surroundings will leave you mesmerized.

Located on the banks of river Cauvery, Hotel Mayura Riverview is the best place to complete your picturesque stay.

Facilities Available:
• 26 homelike cozy rooms, including 6 beautiful river-facing cottages.
• Multi-cuisine restaurant & bar.
• Coracle rides and boating on the river Cauvery.

ಹೋಟೆಲ್ ಮಯೂರ ಭುವೇಶ್ವರಿ, ಹಂಪಿ

ಕಮಲಾಪುರ, ಹಂಪಿ, ವಿಜಯನಗರ-583 221

ಶ್ರೀ ಸುನಿಲ್ ಕುಮಾರ್ 8970650025

08394-200172

[email protected]

ಮತ್ತೆ ಮತ್ತೆ ನೋಡಬೇಕೆನಿಸುವ ಒಂದು ಸುಂದರ ತಾಣವೆಂದರೆ ಹಂಪಿ. ಆಕರ್ಷಿಸುವ ಸೂರ್ಯಾಸ್ತ, ದಿಗಂತಗಳು, ವಾಸ್ತವಿಕವೆನಿಸುವ ಭೂದೃಶ್ಯಗಳು, ವಿಶಾಲ ಆಕಾಶ ಮತ್ತು ಭವ್ಯವಾದ ದೇವಾಲಯಗಳಿಗೆ ಹಂಪಿ ಹೆಸರುವಾಸಿಯಾಗಿದ್ದು, ಮನಃಶಾಂತಿಯನ್ನು ನೀಡುತ್ತದೆ. ಹಂಪಿಯ ವಿಶೇಷತೆಯನ್ನು ಪದಗಳಲ್ಲಿ ವರ್ಣಿಸಲು ಸಾದ್ಯವಿಲ್ಲ. ರಾಯಲ್ ಸೆಂಟರ್ ಮತ್ತು ಸೇಕ್ರೆಡ್ ಸೆಂಟರ್ ಎಂಬ ಎರಡು ಪ್ರದೇಶಗಳಲ್ಲಿರುವ ಪುರಾತನ ಅವಶೇಷಗಳನ್ನು ನೋಡಿದ್ದಲ್ಲಿ ಮನಸ್ಸಿಗೆ ಹಿಂದೆಂದೂ ಇಲ್ಲದ ಸಂತೋಷವಾಗುವುದು.

ಹಂಪಿಯಲ್ಲಿರುವ ಹೋಟೆಲ್ ಮಯೂರ ಭುವನೇಶ್ವರಿ, ಕಮಲಾಪುರ ಇದು ವಿಶ್ವ ಪರಂಪರೆಯ ತಾಣ ವ್ಯಾಪ್ತಿಯಲ್ಲಿರುವ ಏಕೈಕ ಹೋಟೆಲ್ ಆಗಿದೆ. ಇದು 30 ರೂಮ್‍ಗಳನ್ನೊಳಗೊಂಡ ನವೀಕರಿಸಲಾಗಿರುವ ಹೋಟೆಲ್ ಆಗಿದ್ದು, ಹವಾ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ ಮತ್ತು 06 ವಸತಿ ನಿಲಯಗಳನ್ನು ಸಹ ಹೊಂದಿರುತ್ತದೆ.
ಬರುವ ಅತಿಥಿಗಳಿಗೆ ಕಾಂಟಿನೆಂಟಲ್ ಮತ್ತು ಭಾರತೀಯ ಪಾಕ ಪದ್ಧತಿಯೊಂದಿಗೆ ಹಂಪಿಯ ಸವಿರುಚಿಯನ್ನು ಆನಂದಿಸಬಹುದು ಮತ್ತು ಉತ್ತಮ ರೆಸ್ಟೋರೆಂಟ್ ವ್ಯವಸ್ಥೆಯನ್ನು ಪಡೆಯಬಹುದು.
ಸದರಿ ಹೋಟೆಲ್‍ನಲ್ಲಿ ಪ್ರವಾಸಿ ಮಾರ್ಗದರ್ಶಿಗಳೊಂದಿಗೆ ಪ್ರವಾಸಗಳನ್ನು ಕೈಗೊಳ್ಳುವ ವ್ಯವಸ್ಥೆ ಇರುತ್ತದೆ.

ಹೋಟೆಲ್ ಮಯೂರ ಆದಿಲ್ ಷಾಹಿ ವಿಜಯಪುರ

ಸ್ಟೇಷನ್ ರಸ್ತೆ, ವಿಜಯಪುರ-586 101

ಶ್ರೀ ಜಗದೇವಿ ಕೆಂಭಾವಿ 8970650031

0835-250401

[email protected]

ರಜಾ ದಿನಗಳಲ್ಲಿ ಒಂದು ಹೊಸ ಸ್ಥಳವಾದ ಅನ್ವೇಷಣೆಯಲ್ಲಿದ್ದರೆ ವಿಜಯಪುರಕ್ಕೆ ಭೇಟಿ ನೀಡಿ. ಬಿಜಾಪುರದ ಆದಿಲ್ ಶಾಹಿ ರಾಜವಂಶದ ಆಡಳಿತವು ಐತಿಹಾಸಿಕವಾಗಿ ಶ್ರೀಮಂತ ಡೆಕ್ಕನ್ ಪ್ರದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಅವರ ಕೊಡುಗೆಯ ಅನೇಕ ವಿಸ್ಮಯಕಾರಿ ಸ್ಮಾರಕಗಳಲ್ಲಿ ಗೋಲ್‍ಗುಂಬಜ್ ಸ್ಮಾರಕವು ಮೊದಲನೇ ಸ್ಥಾನವನ್ನು ಪಡೆದಿದ್ದು, ಭೂದೃಶ್ಯಗಳು, ಮಸೀದಿಗಳು, ಅರಮನೆಗಳು ಮತ್ತು ವಾಚ್ಟವರ್‍ಗಳು ಬಿಜಾಪುರಕ್ಕೆ ವಿಶಿಷ್ಟವಾದ ಗುರುತನ್ನು ನೀಡುತ್ತದೆ.

ಹೋಟೆಲ್ ಮಯೂರ ಆದಿಲ್ ಶಾಹಿ ಬಿಜಾಪುರ ಘಟಕವು ಗೋಲ್ ಗುಂಬಜ್ ನಿಂದ ಸ್ವಲ್ಪ ದೂರದಲ್ಲಿದ್ದು, ಸ್ಮಾರಕದ ಅದ್ಭುತವಾದ ನೋಟವನ್ನು ನೀಡುತ್ತದೆ.  ಈ ಹೋಟೆಲ್ ಘಟಕವು 4 ಡಬಲ್ ಬೆಡ್ ರೂಮ್‍ಗಳನ್ನು ಹೊಂದಿದೆ ಹಾಗೂ ಘಟಕಕ್ಕೆ ಆಗಮಿಸುವ ಅತಿಥಿಗಳಿಗೆ ಅತ್ಯುತ್ತಮ ಆಹಾರವನ್ನು ಒದಗಿಸಲು ರೆಸ್ಟೋರೆಂಟ್‍ನ್ನು ಹೊಂದಿರುತ್ತದೆ.

ಹೋಟೆಲ್ ಮಯೂರ ಸುದರ್ಶನ , ಊಟಿ

ಫರ್ನ್ ಹಿಲ್, ಊಟಿ-643004, ತಮಿಳುನಾಡು

ಶ್ರೀ ಕಾರ್ತಿಕ್ ಸಂತೋಷ್ 8970650052

0423-2443828

[email protected]

ಊಟಿ ಪ್ರದೇಶದ ಸೌಂದರ್ಯವು ಒಂದು ಸಮ್ಮೋಹನ ಅನುಭವವಾಗಿರುತ್ತದೆ. ಮಾನ್ಸೂನ್ ಸಮಯದಲ್ಲಿ ಒಂದು ಮಾಯಾಲೋಕದಂತೆ ರೂಪುಗೊಳ್ಳುವ ಗಿರಿದಾಮವು ಹೆಚ್ಚಿನ ಸಮಯ ಇರುವಂತೆ ಪ್ರೇರೆಪಿಸುತ್ತದೆ.
ಮೈಸೂರಿನಿಂದ ಕೇವಲ 03 ಗಂಟೆಗಳ ಪ್ರಯಾಣವಿರುವ ಊಟಿ ಪ್ರದೇಶವು ತಮಿಳುನಾಡಿನಲ್ಲಿದ್ದು, ರಜಾ ದಿನಗಳನ್ನು ಕಳೆಯುವವರಿಗೆ, ಅಲೆದಾಡಲು ಬಯಸುವವರಿಗೆ ಹಾಗೂ ನಗರ ಜೀವನದಿಂದ ಬೇಸತ್ತು ವಿಶ್ರಾಂತಿ ಪಡೆಯಬಯಸುವವರಿಗೆ ಊಟಿ ಜನಪ್ರಿಯ ಸ್ಥಳವಾಗಿರುತ್ತದೆ. ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಊಟಿ ಪ್ರದೇಶವು ಸುಂದರವಾದ ಸರೋವರ, ಜಲಪಾತ, ವಿಶಾಲವಾದ ಸಸ್ಯ ಉದ್ಯಾನವನ, ಅಚ್ಚಹಸಿರಿನ ಅರಣ್ಯ ಹಾಗೂ ಕಣಿವೆಗಳನ್ನು ಒಳಗೊಂಡಿದೆ.
ಹೋಟೆಲ್ ಮಯೂರ ಸುದರ್ಶನ ಊಟಿ ಘಟಕವು ಸುಂದರವಾದ ಹಸಿರು ಪರಿಸರ ಹೊಂದಿದ ಫರ್ನ್ ಬೆಟ್ಟದಲ್ಲಿದ್ದು, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುತ್ತದೆ. ಹೋಟೆಲ್‍ನಲ್ಲಿ ಒಟ್ಟು 03 ಮರದ ಕುಟೀರಗಳು, 02 ಹವಾನಿಯಂತ್ರಿತವಲ್ಲದ ಕೊಠಡಿಗಳು ಹಾಗೂ 20 ಹವಾನಿಯಂತ್ರಿತವಲ್ಲದ ಡಿಲೆಕ್ಸ್ ಬೆಡ್ ರೂಮ್‍ಗಳ ಇರುತ್ತವೆ.
ಅಲ್ಲದೇ, ಉತ್ತಮ ರೆಸ್ಟೋರೆಂಟ್ ಸೌಲಭ್ಯವಿದ್ದು, ಊಟಿ ಶೈಲಿಯ ಪಾಕಪದ್ಧತಿ ಹೊಂದಿರುತ್ತದೆ.
ಮುಂದಿನ ಬಾರಿ ಪ್ರವಾಸ ಕೈಗೊಳ್ಳುವ ಮನಸ್ಸಾದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

 

ಹೋಟೆಲ್ ಮಯೂರ ಹೊಯ್ಸಳ ಮೈಸೂರು

#2, ಝಾನ್ಸಿ ಲಕ್ಷ್ಮಿಬಾಯಿ ರಸ್ತೆ, ಮೈಸೂರು – 570 005

ಶ್ರೀ ಮಧುರಾಜ್‌ ಕೆ. ಆರ್ 8970650014

0821-2426160

[email protected]

Time stands still in Mysuru!
The city weaves an aura around you and you feel as if you have always belonged here. Its beauty makes you savour every living moment to the fullest. Known as the ‘City of Palaces’ and the ‘Cultural City’, the majestic Mysuru was one of the longest reigning dynasties in Indian history.

Hotel Mayura Hoysala is located in the centre of the city and close to the railway station which directly offers convenience to visitors. Nestled in a heritage building, the hotel offers gracious accommodation in the form of 31 Air-conditioned double bedrooms, 10 standard double bedrooms and 11 Family Dormitory Rooms. The warm hospitable hotel has a Bar and Restaurant, a Garden Cafe and Conference/Party Hall with a seating capacity of 50 pax, offering guests a homely dining experience.

ಬಜೆಟ್ ಹೋಟೆಲ್‌ಗಳು

  • (English) Mayura Pavithra Yediyur
  • ಹೋಟೆಲ್ ಮಯೂರ ಶಾಂತಲಾ ಹಳೇಬೀಡು
  • ಹೋಟೆಲ್ ಮಯೂರ ಯಗಚಿ ಬೇಲೂರು
  • ಹೋಟೆಲ್ ಮಯೂರ ಗೇರುಸೊಪ್ಪ, ಜೋಗ್ ಫಾಲ್ಸ್
  • ಹೋಟೆಲ್ ಮಯೂರ ನಿಸರ್ಗ ಪರ್ಲ್ ವ್ಯಾಲಿ
  • ಹೋಟೆಲ್ ಮಯೂರ ವಿಜಯನಗರ ಟಿ.ಬಿ ಡ್ಯಾಂ
  • ಹೋಟೆಲ್ ಮಯೂರ ತಲಕಾವೇರಿ
  • ಹೋಟೆಲ್ ಮಯೂರ ಭರಚುಕ್ಕಿ ಶಿವನಸಮುದ್ರ
  • ಹೋಟೆಲ್ ಮಯೂರ ವೇಲಾಪುರಿ ಬೇಲೂರು
  • ಹೋಟೆಲ್ ಮಯೂರ ಸಂಗಮ ಮೇಕೆದಾಟು
  • ಹೋಟೆಲ್ ಮಯೂರ ದುರ್ಗ ಚಿತ್ರದುರ್ಗ
  • ಹೋಟೆಲ್ ಮಯೂರ ಚಾಲುಕ್ಯ ಬಾದಾಮಿ
  • ಹೋಟೆಲ್ ಮಯೂರ ಕಾವೇರಿ ಕೆ.ಆರ್.ಎಸ್ (ಬೃಂದಾವನ್ ಉದ್ಯಾನಗಳು)
  • ಹೋಟೆಲ್ ಮಯೂರ ಬಿಳಿಗಿರಿ, ಬಿ.ಆರ್.ಹಿಲ್ಸ್

(English) Mayura Pavithra Yediyur

(English) Yediyuru, Kunigal, Karnataka 572142

ಸುಮೇರ್‌ ಪುಜಾರ್

(English) 8970650046

(English) [email protected]

Sorry, this entry is only available in English.

ಹೋಟೆಲ್ ಮಯೂರ ಶಾಂತಲಾ ಹಳೇಬೀಡು

ಹಳೆಬೀಡು, ಹಾಸನ - 573 121

ಶ್ರೀ ಶ್ರೇಯಸ್ 8970654600

0817-7273224

[email protected]

ನಿಮ್ಮ ಮುಂದಿನ ದೀರ್ಘ ಕಾಲದ ವಾರಾಂತ್ಯದಲ್ಲಿ ವಾಸ್ತುಶಿಲ್ಪದ ಅದ್ಭುತ ಕೆತ್ತನೆಗಳಿಗೆ ಸಾಕ್ಷಿಯಾಗಿರುವ ಹಳೆಬೀಡು ಪ್ರದೇಶಕ್ಕೆ ಭೇಟಿ ನೀಡುವ ಕುರಿತಾಗಿರಲಿ. ಇದು ಹೊಯ್ಸಳ ವಂಶದ ಮೊತ್ತೊಂದು ರಾಜಧಾನಿಯಾಗಿದ್ದು, ಪ್ರವಾಸಿ ತಾಣದಲ್ಲಿರುವ ಭವ್ಯವಾದ ಹೊಯ್ಸಳೇಶ್ವರ ದೇವಸ್ಥಾನವು ವಿಶ್ವದಾದ್ಯಂತ ಇರುವ ಪ್ರೇಕ್ಷಕರನ್ನು ಆಕರ್ಷಿಸುವ ಕೇಂದ್ರ ಬಿಂದುವಾಗಿದೆ. ದೇವಾಲಯವು ಶಿವನಿಗೆ ಅರ್ಪಿತವಾಗಿದೆ ಮತ್ತು ಸುತ್ತಲು ಕೊಳಗಳು, ಸರೋವರಗಳು ಮತ್ತು ಮಂಟಪಗಳನ್ನು ಹೊಂದಿದೆ. ದೇವಾಲಯದ ಗೋಡೆಯ ಮೇಲಿನ ಸಾವಿರ ಆಕೃತಿಗಳ ಕೆತ್ತನೆಗಳು ರಾಮಾಯಣ ಮತ್ತು ಮಹಾಭಾರತದ ಕಥೆಗಳಿಗೆ ಸಂಬಂಧಿಸಿದ್ದಾಗಿದೆ. ಪುರಾತತ್ತ್ವ ಶಾಸ್ತ್ರದ ಇಲಾಖೆಯ ವಸ್ತು ಸಂಗ್ರಹಾಲಯವು ಹೋಟೆಲ್‍ನ ಸಂಕೀರ್ಣದೊಳಗಿದೆ ಹಾಗೂ ಪಾಶ್ವನಾಥ ಬಸದಿ ಹೊಳಪು ಕಂಬಗಳು ಹೋಟೆಲ್‍ನ ಸಮೀಪದಲ್ಲಿದೆ.

 

ಹೋಟೆಲ್ ಮಯೂರ ಶಾಂತಲಾ ಹಳೇಬೀಡು ಘಟಕವು ದೇವಾಲಯದ ಪಕ್ಕದಲ್ಲಿಯೇ ಇದ್ದು, ಹಿಂದೂ ವಾಸ್ತುಶಿಲ್ಪದ ಸೌಂದರ್ಯವನ್ನು ಸವಿಯಲು ಬಯಸುವವರಿಗೆ ಇದು ಸೂಕ್ತವಾದ ಪ್ರದೇಶವಾಗಿದೆ. ಹೋಟೆಲ್ ಘಟಕವು 03 ಎಸಿ ಡಬಲ್ ಬೆಡ್ ರೂಮ್ ಮತ್ತು 1 ನಾಲ್ಕು ಬೆಡ್ ರೂಮ್‍ನನ್ನು ಹೊಂದಿರುವುದರೊಂದಿಗೆ ಕರ್ನಾಟಕದ ಸವಿಯಾದ ತಿನಿಸುಗಳನ್ನು ಒಂದೇ ಸೂರಿನಡಿ ಒದಗಿಸುವ ರೆಸ್ಟೋರೆಂಟ್‍ನ್ನು ಹೊಂದಿರುತ್ತದೆ. ನಿಮ್ಮ ಮುಂದಿನ ದೀರ್ಘ ಕಾಲದ ವಾರಾಂತ್ಯದಲ್ಲಿ ವಾಸ್ತುಶಿಲ್ಪದ ಅದ್ಭುತ ಕೆತ್ತನೆಗಳಿಗೆ ಸಾಕ್ಷಿಯಾಗಿರುವ ಹಳೆಬೀಡು ಪ್ರದೇಶಕ್ಕೆ ಭೇಟಿ ನೀಡುವ ಕುರಿತಾಗಿರಲಿ. ಇದು ಹೊಯ್ಸಳ ವಂಶದ ಮೊತ್ತೊಂದು ರಾಜಧಾನಿಯಾಗಿದ್ದು, ಪ್ರವಾಸಿ ತಾಣದಲ್ಲಿರುವ ಭವ್ಯವಾದ ಹೊಯ್ಸಳೇಶ್ವರ ದೇವಸ್ಥಾನವು ವಿಶ್ವದಾದ್ಯಂತ ಇರುವ ಪ್ರೇಕ್ಷಕರನ್ನು ಆಕರ್ಷಿಸುವ ಕೇಂದ್ರ ಬಿಂದುವಾಗಿದೆ. ದೇವಾಲಯವು ಶಿವನಿಗೆ ಅರ್ಪಿತವಾಗಿದೆ ಮತ್ತು ಸುತ್ತಲು ಕೊಳಗಳು, ಸರೋವರಗಳು ಮತ್ತು ಮಂಟಪಗಳನ್ನು ಹೊಂದಿದೆ. ದೇವಾಲಯದ ಗೋಡೆಯ ಮೇಲಿನ ಸಾವಿರ ಆಕೃತಿಗಳ ಕೆತ್ತನೆಗಳು ರಾಮಾಯಣ ಮತ್ತು ಮಹಾಭಾರತದ ಕಥೆಗಳಿಗೆ ಸಂಬಂಧಿಸಿದ್ದಾಗಿದೆ. ಪುರಾತತ್ತ್ವ ಶಾಸ್ತ್ರದ ಇಲಾಖೆಯ ವಸ್ತು ಸಂಗ್ರಹಾಲಯವು ಹೋಟೆಲ್‍ನ ಸಂಕೀರ್ಣದೊಳಗಿದೆ ಹಾಗೂ ಪಾಶ್ವನಾಥ ಬಸದಿ ಹೊಳಪು ಕಂಬಗಳು ಹೋಟೆಲ್‍ನ ಸಮೀಪದಲ್ಲಿದೆ.

 

ಹೋಟೆಲ್ ಮಯೂರ ಶಾಂತಲಾ ಹಳೇಬೀಡು ಘಟಕವು ದೇವಾಲಯದ ಪಕ್ಕದಲ್ಲಿಯೇ ಇದ್ದು, ಹಿಂದೂ ವಾಸ್ತುಶಿಲ್ಪದ ಸೌಂದರ್ಯವನ್ನು ಸವಿಯಲು ಬಯಸುವವರಿಗೆ ಇದು ಸೂಕ್ತವಾದ ಪ್ರದೇಶವಾಗಿದೆ. ಹೋಟೆಲ್ ಘಟಕವು 03 ಎಸಿ ಡಬಲ್ ಬೆಡ್ ರೂಮ್ ಮತ್ತು 1 ನಾಲ್ಕು ಬೆಡ್ ರೂಮ್‍ನನ್ನು ಹೊಂದಿರುವುದರೊಂದಿಗೆ ಕರ್ನಾಟಕದ ಸವಿಯಾದ ತಿನಿಸುಗಳನ್ನು ಒಂದೇ ಸೂರಿನಡಿ ಒದಗಿಸುವ ರೆಸ್ಟೋರೆಂಟ್‍ನ್ನು ಹೊಂದಿರುತ್ತದೆ.

ಹೋಟೆಲ್ ಮಯೂರ ಯಗಚಿ ಬೇಲೂರು

(English) Opposite Yagachi Dam, Chickamangaluru Road, Chikkabydigere Village, Belur -573115, Hassan

(English) Mr. Pappana

(English) 8970650041

(English) [email protected]

Sorry, this entry is only available in English.

ಹೋಟೆಲ್ ಮಯೂರ ಗೇರುಸೊಪ್ಪ, ಜೋಗ್ ಫಾಲ್ಸ್

ಜೋಗಜಲಪಾತ, ಸಾಗರ ತಾಲ್ಲೂಕು, ಶಿವಮೊಗ್ಗ-577435

ಶ್ರೀ ಮನೋಜಕುಮಾರ್ , 9480595732

08186-244732

[email protected]

ಪ್ರಕೃತಿಯ ನೈಜ್ಯ ಸೌಂದರ್ಯತೆಯ ಅನುಭವ ಪಡೆಯಲು, ಯಾವುದೇ ಹುಡುಕಾಟವಿಲ್ಲದೇ ಜೋಗ್‍ಫಾಲ್ಸ್ ಭೇಟಿ ನೀಡಬಹುದು. ಕಪ್ಪು ಬಂಡೆಯ ಮೇಲೆ ಬೀಳುವ ಸ್ಪಟಿಕದ ನೀರಿನ ಕುಸಿತವು ಕಿವಿಗೆ ಸಂಗೀತದಂತೆ ಭಾಸವಾಗುತ್ತದೆ.

ಇದರ ಸೌಂದರ್ಯವನ್ನು ಬೆರಗುಗೊಳಿಸುವ ಭವ್ಯತೆಯನ್ನು ಅನುಭವಿಸಲು ಮಾತ್ರ ಸಾಧ್ಯವಿದ್ದು, ಊಹಿಸಲು ಅಥವಾ ಚಿತ್ರಗಳಲ್ಲಿ ತೋರಿಸಲು ಸಾಧ್ಯವಿರುವುದಿಲ್ಲ.

 

ಗೇರುಸೊಪ್ಪ ಎಂದು ಕರೆಯಲ್ಪಡುವ ಜೋಗ್ ಫಾಲ್ಸ್ ಭಾರತ ದೇಶದ ಎರಡನೇ ಅತ್ಯಂತ ಎತ್ತರದ ಜಲಪಾತವಾಗಿದೆ. ವಿಶ್ವದ ಅತ್ಯುತ್ತಮ ಶ್ರೇಯಾಂಕಿತ, ಅದ್ಬುತ ಜಲಪಾತವಾಗಿದ್ದು, ಶರಾವತಿ ನದಿಯು 829 ಅಡಿ ಎತ್ತರದಿಂದ ದುಮ್ಮಿಕ್ಕುವುದನ್ನು ನೋಡಬಹುದು. ನಾಲ್ಕು ವಿಶಿಷ್ಟ ಕಿರು ಜಲಪಾತಗಳಾದ ರಾಜ, ರಾಣಿ, ರೋರರ್ ರಾಕೇಟ್ ಜಲಪಾತಗಳು ಸೂರ್ಯನ ಕಿರಣಗಳಿಂದ ರೂಪುಗೊಳ್ಳುವ ಮಳೆಬಿಲ್ಲನ್ನು ಜಲಪಾತದಿಂದ ರಚಿಸಿದಂತೆ ಕಾಣುತ್ತದೆ.

 

ಹೋಟೆಲ್ ಮಯೂರ ಗೇರುಸೊಪ್ಪ, ಜೋಗ್ ಫಾಲ್ಸ್ ಜೋಗ್ ಫಾಲ್ಸ್‍ನ ಒಂದು ಅದ್ಭುತ ನೋಟವನ್ನು ನೀಡುತ್ತದೆ. ಸದರಿ ಹೋಟೆಲ್ 11 ಕೊಠಡಿಗಳನ್ನೊಳಗೊಂಡಿದ್ದು, ಅದರಲ್ಲಿ 06 ಹವಾ ನಿಯಂತ್ರಿತ ಕೊಠಡಿಗಳು, 04 ಉತ್ತಮ ಡಬಲ್ ಬೆಡ್ ಕೊಠಡಿಗಳು ಹಾಗೂ 01 ಹತ್ತು ಬೆಡ್ ಉಳ್ಳ ವಸತಿ ನಿಲಯವನ್ನು ಹೊಂದಿದೆ. ಅಲ್ಲದೇ, ಉತ್ತಮ ರೆಸ್ಟೋರೆಂಟ್ ಹೊಂದಿದ್ದು, ತನ್ನ ಪ್ರವಾಸಿಗರಿಗಾಗಿ ಸ್ಥಳವೀಕ್ಷಣೆ ಪ್ರವಾಸಗಳನ್ನು ಆಯೋಜಿಸುತ್ತದೆ.

ಹೋಟೆಲ್ ಮಯೂರ ನಿಸರ್ಗ ಪರ್ಲ್ ವ್ಯಾಲಿ

ಮುತ್ಯಾಲಮಡುವು ಆನೇಕಲ್ – 562 106

ಶ್ರೀ ಗಂಗಾಧರ್ 8970650034

080 27859303

[email protected]

ಕಣಿವೆಯಿಂದ ನೀರು ಮುತ್ತುಗಳಂತೆ ಬಂಡೆಗಳ ಮೇಲೆ ಬಿದ್ದು ಸಂಗೀತದಂತೆ ಪ್ರತಿಧ್ವನಿಸುವ ಕಲ್ಪನೆಯೇ ಅದ್ಭುತವಾಗಿದೆ. ಈ ಕಲ್ಪನೆಗೆ ಜೀವಂತಿಕೆ ನೀಡಲು ಹಾಗೂ ಈ ಸುಂದರವಾದ ಅನುಭವವನ್ನು ಪಡೆಯಲು ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿ ಆನೇಕಲ್ ಬಳಿ ಇರುವ ಮುತ್ಯಾಲಮಡುವು ಸ್ಥಳಕ್ಕೆ ಆಗಮಿಸಿ.

 

ಹೋಟೆಲ್ ಮಯೂರ ನಿಸರ್ಗ ಪರ್ಲ್ ವ್ಯಾಲಿ ಘಟಕವು ಮುತ್ಯಾಲಮಡುವಿಗೆ ಅತೀ ಸಮೀಪದಲ್ಲಿದ್ದು, ಆನೇಕಲ್ ನಿಂದ 5 ಕಿ.ಮೀ ದೂರದಲ್ಲಿದೆ. ಸದರಿ ಹೋಟೆಲ್ ಘಟಕವು 05 ಬೆಡ್‍ರೂಮ್ ಗಳನ್ನು ಮತ್ತು ರೆಸ್ಟೋರೆಂಟ್‍ನ್ನು ಹೊಂದಿದ್ದು, ಇಲ್ಲಿಗೆ ಆಗಮಿಸುವ ಅತಿಥಿಗಳಿಗೆ ಮನೆಯಲ್ಲಿ ಇರುವಂತೆ ಬಾಸವಾಗುತ್ತದೆ.

ಹೋಟೆಲ್ ಮಯೂರ ವಿಜಯನಗರ ಟಿ.ಬಿ ಡ್ಯಾಂ

ಟಿ.ಬಿ. ಡ್ಯಾಂ, ಹೊಸಪೇಟೆ ಬಳ್ಳಾರಿ-583 225

ಶ್ರೀ ಚೇತನ್ 8970650002

0839-4259270

[email protected]

ನಿಮಗೆ ಅಣೆಕಟ್ಟಿನ ಕುರಿತಂತೆ ಯಾವುದಾದರೂ ದೃಷ್ಠಿಕೊನವಿದ್ದಲ್ಲಿ, ದೃಷ್ಠಿಕೋನವನನು ಪರಾಮರ್ಷಿಸಲು ಅತ್ಯಂತ ಸುಂದರ ತಾಣವಾದ ತುಂಗಭದ್ರ ಅಣೆಕಟ್ಟಿಗೆ ಭೇಟಿ ನೀಡಬಹುದಾಗಿದೆ. ಅಣೆಕಟ್ಟು ಪ್ರದೇಶವು ಹೊಸಪೇಟೆಗೆ ಅತ್ಯಂತ ಸಮೀಪವಿದ್ದು, ಇದು ಹಂಪಿಯ ವಿಶ್ವ ಪರಂಪರೆಯ ತಾಣವನ್ನು ಹೋಲುವ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ.

 

 

ಹೋಟೆಲ್ ಮಯೂರ ವಿಜಯನಗರ ಘಟಕವು ಅಣೆಕಟ್ಟಿನ ಪಕ್ಕದಲ್ಲಿದೇ ಇದ್ದು, ಅಲ್ಲಿಗೆ ಆಗಮಿಸುವ ಪ್ರಯಾಣಿಕರಿಗೆ ಹಸಿರು ಮತ್ತು ಪ್ರಶಾಂತತೆಯ ವಾತಾವರಣವನ್ನು ನೀಡುತ್ತದೆ. ಹೋಟೆಲ್ ಘಟಕವು ಒಟ್ಟು 20 ಕೊಠಡಿಗಳನ್ನು ಹೊಂದಿದ್ದು, ಅವುಗಳಲ್ಲಿ 13 ಡಬಲ್ ಬೆಡ್ ರೂಮ್ ಮತ್ತು 7 ಹವಾ ನಿಯಂತ್ರಿತ ಬೆಡ್ ರೂಮ್‍ಗಳಾಗಿರುತ್ತದೆ. ಇದು ರೆಸ್ಟೋರೆಂಟ್ ಮತ್ತು ಬೀಯರ್ ಪಾರ್ಲರ್‍ನ್ನು ಹೊಂದಿದ್ದು, ಪ್ರವಾಸಿಗರಿಗೆ ವಾಸ್ತವ್ಯದ ಪರಿಪೂರ್ಣ ಅನುಭವವನ್ನು ನೀಡುತ್ತದೆ.

ಹೋಟೆಲ್ ಮಯೂರ ತಲಕಾವೇರಿ

ಭಾಗಮಂಡಲ ಕೂರ್ಗ್ – 571 247

ಶ್ರೀ ನವೀನ್ ಕೆ.ಆರ್ 8970650030

0827-2243143

[email protected]

ಭಾಗಮಂಡಲವು ಕೇವಲ ಗಿರಿದಾಮವಲ್ಲದೇ, ಸ್ವರ್ಗದಂತಿರುವ ತಾಣವಾಗಿದ್ದು, ಭಕ್ತಿ ಮತ್ತು ಶಾಂತಿಯ ಹುಡುಕಾಟದಲ್ಲಿರುವ ಜನರಿಗೆ ಇದು ಸೂಕ್ತವಾದ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಎರಡು ನದಿಗಳ ಸಂಗಮವಾಗಲಿದ್ದು, ಮೂರನೇಯ ಜಲಾಂತರ್ಗಾಮಿ ಕೂಡಾ ಸೇರಿಕೊಳ್ಳುತ್ತದೆ. ನದಿಯ ದಂಡೆಯಲ್ಲಿ ಹಿಂದೂ ಧರ್ಮದ ತ್ರಿಮೂರ್ತಿಗಳಿಗೆ ಮೀಸಲಾಗಿರುವ ದೇವಾಲಯಗಳಿದ್ದು, ಶಿವನನ್ನು ಭಗಂಡೇಶ್ವರ, ಬ್ರಹ್ಮ ಮತ್ತು ಮಾಹಾವಿಷ್ಟು ಎಂದು ಪೂಜಿಸಲಾಗುತ್ತದೆ. ಕಾವೇರಿ ನದಿಯ ಮೂಲವಾದ ತಲಕಾವೇರಿ 7 ಕಿ.ಮೀ ದೂರದಲ್ಲಿದೆ.

ಹೋಟೆಲ್ ಮಯೂರ ತಲಕಾವೇರಿ ಘಟಕವು ಬೆಟ್ಟದ ಇಳಿಜಾರಿನಲ್ಲಿದೆ ಮತ್ತು ಮೋಡಿ ಮಾಡುವ ಕೂರ್ಗ್ ಭೂದೃಶ್ಯದ ಪಕ್ಷಿಗಳ ನೋಟವನ್ನು ನೀಡುತ್ತದೆ. ಸದರಿ ಹೋಟೆಲ್ ಘಟಕವು 18 ಡಬಲ್ ರೂಮ್‍ಗಳು ಮತ್ತು ಸಸ್ಯಾಹಾರಿ ರೆಸ್ಟೋರೆಂಟ್ ಹೊಂದಿರುವ ಆಕರ್ಷಕ ಕೇಂದ್ರವಾಗಿದೆ.

ಹೋಟೆಲ್ ಮಯೂರ ಭರಚುಕ್ಕಿ ಶಿವನಸಮುದ್ರ

ಕೊಳ್ಳೇಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ-571 440

ಶ್ರೀ ಸುರೇಶ್ ಎಸ್ 8970650053

8970650053

[email protected]

ಸುಂದರವಾದ ಶಿವನಸಮುದ್ರ ಜಲಪಾತವು ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿದೆ. ಶಿವನಸಮುದ್ರ ಎಂದರೆ ಭಗವಾನ್ ಶಿವನ ಸಮುದ್ರ ಎಂಬುದಾಗಿದೆ. ಇದು ವಿಭಜಿತ ಜಲಪಾತವಾಗಿದ್ದು, ಒಂದಕ್ಕಿಂತ ಹೆಚ್ಚಿನ ಬದಿಗಳನ್ನು ಹೊಂದಿರುತ್ತದೆ. ಪಶ್ಚಿಮ ಶಾಖೆಯಲ್ಲಿ ಗಗನಚುಕ್ಕಿ ಜಲಪಾತವು ಮತ್ತು ಪೂರ್ವ ಶಾಖೆಯಲ್ಲಿ ಭರಚುಕ್ಕಿ ಜಲಪಾತಗಳಿದ್ದು, ಎರಡು ಜಲಪಾತಗಳನ್ನು ಅವಳಿ ಜಲಪಾತಗಳು ಎಂದು ಕರೆಯಲಾಗುತ್ತದೆ.

 

ಹೋಟೆಲ್ ಮಯೂರ ಭರಚುಕ್ಕಿ ಘಟಕವು ಶಿವನಸಮುದ್ರ ಜಲಪಾತದ ಸಮೀಪವಿದ್ದು, ಇದು ಪ್ರವಾಸಿಗರಿಗೆ ಪ್ರಕೃತಿಯ ಸೌಂದರ್ಯವನ್ನು ಹತ್ತಿರದಿಂದ ಸವಿಯಲು ಅವಕಾಶ ಕಲ್ಪಿಸುತ್ತದೆ. ಹೋಟೆಲ್ ಘಟಕವು 04 ಹವಾ ನಿಯಂತ್ರಿತ ಡಬಲ್ ಬೆಡ್ ರೂಮ್‍ಗಳನ್ನು ಒಳಗೊಂಡಿದ್ದು, ನಗರ ಪ್ರದೇಶದಿಂದ ಹೊರ ಬಂದು ಪ್ರಕೃತಿ ವಾತಾವರಣದಲ್ಲಿ ಸ್ವಲ್ಪ ಸಮಯ ಕಳೆಯಲು ಅವಕಾಶವನ್ನು ಒದಗಿಸುತ್ತದೆ.

ಹೋಟೆಲ್ ಮಯೂರ ವೇಲಾಪುರಿ ಬೇಲೂರು

ದೇವಸ್ಥಾನ ರಸ್ತೆ, ಬೇಲೂರು, ಹಾಸನ-573115

ಶ್ರೀ ಶ್ರೇಯಸ್ 8970650026

0817-7222209

[email protected]

ಹೆಚ್ಚಿನ ಒತ್ತಡದಲ್ಲಿರುವವರು ವಿಶ್ರಾಂತಿಯನ್ನು ಪಡೆಯಲು ಹೊಸ ಜಾಗಕ್ಕೆ ತೆರಳಲು ಇಚ್ಛಿಸಿದರೆ, ಬೇಲೂರಿಗೆ ಪ್ರಯಾಣಿಸಬಹುದಾಗಿದೆ. ಏಕೆಂದರೆ, ಬೇಲೂರು ಉತ್ತಮವಾದ ಪ್ರಕೃತಿಕ ಸೌಂದರ್ಯವನ್ನು ಹೊಂದಿದೆ ಹಾಗೂ ಹೊಯ್ಸಳ ರಾಜವಂಶದ ರಾಜಧಾನಿಗಳಲ್ಲಿ ಒಂದಾದ ಬೇಲೂರು ಭವ್ಯವಾದ ಹೊಯ್ಸಳ ದೇವಾಲಯದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಬೇಲೂರಿನ ದೇವಾಲಯಗಳು ಅದರ ಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಚನ್ನಕೇಶವ ದೇವಸ್ಥಾನವು ಹೊಯ್ಸಳ ರಾಜ ವಿಷ್ಣುವರ್ಧನ ಕಾಲದಲ್ಲಿ ನಿರ್ಮಾಣಗೊಂಡಿರುತ್ತದೆ. ವೀರನಾರಾಯಣ ದೇವಸ್ಥಾನ, ಶ್ರೀದೇವಿ ದೇವಸ್ಥಾನ ಹಾಗೂ ಭೂದೇವಿ ದೇವಸ್ಥಾನಗಳು ದಕ್ಷಿಣ ಭಾರತದ ಭವ್ಯತೆಯ ಕಥೆಗಳನ್ನು ವಿವರಿಸುತ್ತದೆ.

 

ಹೋಟೆಲ್ ಮಯೂರ ವೇಲಾಪುರಿ ಬೇಲೂರು ಘಟಕಕ್ಕೆ ದೇವಾಲಯದ ಸಂಕೀರ್ಣದಿಂದ ಕಾಲುದಾರಿಯಲ್ಲಿ 05 ನಿಮಿಷದಲ್ಲಿ ತೆರಳಬಹುದಾಗಿದೆ ಮತ್ತು ದೇವಾಲಯಗಳ ಸೌಂದರ್ಯವನ್ನು ಆರಾಧಿಸುವವರಿಗೆ ಹೆಚ್ಚು ಸಮಯ ಕಳೆಯಲು ಬಯಸುವವರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೋಟೆಲ್ ಘಟಕವು 14 ಹವಾ ನಿಯತ್ರಿತ ಕೊಠಡಿ ಮತ್ತು ಹವಾ ರಹಿತ ಕೊಠಡಿಗಳನ್ನು ಹಾಗೂ 02 ವಸತಿ ನಿಲಯಗಳನ್ನು ಹೊಂದಿರುವುದರೊಂದಿಗೆ, ರೆಸ್ಟೋರೆಂಟ್ ಮತ್ತು ಬಾರ್‍ನ್ನು ಹೊಂದಿರುತ್ತದೆ.

ಹೋಟೆಲ್ ಮಯೂರ ಸಂಗಮ ಮೇಕೆದಾಟು

ಕನಕಪುರ ತಾಲ್ಲೂಕು ರಾಮನಗರ – 571 427

ಶ್ರೀ ಚಂದ್ರಪ್ಪ 8277248039

080 2976 0100

[email protected]

ನೀವು ಬೆಂಗಳೂರಿನವರಾಗಿದ್ದರೆ ಖಂಡಿತವಾಗಿ ಕನಕಪುಕ್ಕೆ ಭೇಟಿ ನೀಡುತ್ತೀರಿ. ಅಲ್ಲಿಂದ, ಅರ್ಕಾವತಿ ಕಾವೇರಿಯೊಂದಿಗೆ ವಿಲೀನಗೊಳ್ಳುವ ಸ್ಥಳವಾದ ಸಂಗಮ ಮತ್ತು ಮೇಕೆದಾಟುವಿಗೆ ಪ್ರವಾಸ ಕೈಗೊಳ್ಳಿ. ಸ್ಥಳಕ್ಕೆ ಒಂದು ಪೌರಾಣಿಕ ಕಥೆಯಿದೆಕಾವೇರಿ ನದಿಯಿಂದ ಹಾರಿ ಹೋಗಿದೆ ಎಂದು ನಂಬಲಾದ ಮೇಕೆ, ಶಿವನ ವೇಷದಲ್ಲಿತ್ತು.

 

ಹೋಟೆಲ್ ಮಯೂರ ಸಂಗಮ ಘಟಕವು ಮೇಕೆದಾಟುವಿಗೆ ಸಮೀಪದಲ್ಲಿದೆ. ಹೋಟೆಲ್ ಘಟಕವು ವಿವಿಧ ರೀತಿಯ ವಸತಿ ವ್ಯವಸ್ಥೆಯನ್ನು ಒದಗಿಸಲಿದ್ದು, 10 ಹವಾ ನಿಯಂತ್ರಿತ ಕೊಠಡಿಗಳು, 04 ಡಬಲ್ ಬೆಡ್ ರೂಮ್ ಮತ್ತು 14 ಹಾಸಿಗೆಗಳನ್ನು ಹೊಂದಿರುವ 01 ವಸತಿ ನಿಲಯವನ್ನು ಹೊಂದಿದೆ.

ಹೋಟೆಲ್ ಮಯೂರ ದುರ್ಗ ಚಿತ್ರದುರ್ಗ

ಮಹಾರಾಣಿ ಕಾಲೇಜ್ ಹತ್ತಿರ, ಕೋಟೆ ಎದುರುಗಡೆ, ಚಿತ್ರದುರ್ಗ-577501

ಶ್ರೀ ಚೇತನ್ 8970656600

0819 4234342

[email protected]

ಶೌರ್ಯ, ಘನತೆ ಮತ್ತು ಅಶ್ವದಳದ ಭೂಮಿ ಚಿತ್ರದುರ್ಗ ಒಂದು ಅದ್ಭುತವಾದ ಪ್ರದೇಶ. ಇದು ಡೆಕ್ಕನ್ ಪ್ರಸ್ಥಭೂಮಿಯ ಹೃದಯ ಭಾಗದಲ್ಲಿರುವ ಬೆಂಗಳೂರಿನ ವಾಯುವ್ಯಕ್ಕೆ 202 ಕಿ.ಮೀ ದೂರದಲ್ಲಿದೆ. ಚಿತ್ರದುರ್ಗವು ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಅಸ್ಥಿತ್ವದಲ್ಲಿದೆ ಎಂದು ಹೇಳಲಾಗುತ್ತದೆ. ತುಂಗಾಭದ್ರ ನದಿಯು ವಾಯುವ್ಯದಲ್ಲಿ ಹರಿಯುವುದರೊಂದಿಗೆ ಜಿಲ್ಲೆಯು ವೇದಾವತಿ ನದಿಯ ಕಣಿವೆಯಲ್ಲಿ ನೆಲೆಸಿದೆ.

 

ಹೋಟೆಲ್ ಮಯೂರ ದುರ್ಗ ಘಟಕವು ಚಿತ್ರದುರ್ಗ ಕೋಟೆಯ ಸಮೀಪದಲ್ಲಿದೆ. ಹೋಟೆಲ್ ಘಟಕವು ಪ್ರವಾಸಿಗರಿಗೆ ವಿವಿಧ ರೀತಿಯ ವಸತಿ ಸೌಲಭ್ಯವನ್ನು ಒದಗಿಸುತ್ತದೆ-08 ಹವಾ ನಿಯಂತ್ರಿತ ಕೊಠಡಿಗಳು, 8 ಹಾಸಿಗೆಯುಳ್ಳ 04 ವಸತಿ ನಿಲಯಗಳನ್ನು ಹೊಂದಿರುವುದಲ್ಲದೇ, ವಿಶೇಷ ದಿನಗಳನ್ನು ಆಚರಿಸಲು ಕಾನ್ಫರೆನ್ಸ್ ಹಾಲ್ ಮತ್ತು ಸಭಾಂಗಣವನ್ನು ಹೊಂದಿರುತ್ತದೆ. ಶೌರ್ಯ, ಘನತೆ ಮತ್ತು ಅಶ್ವದಳದ ಭೂಮಿ ಚಿತ್ರದುರ್ಗ ಒಂದು ಅದ್ಭುತವಾದ ಪ್ರದೇಶ. ಇದು ಡೆಕ್ಕನ್ ಪ್ರಸ್ಥಭೂಮಿಯ ಹೃದಯ ಭಾಗದಲ್ಲಿರುವ ಬೆಂಗಳೂರಿನ ವಾಯುವ್ಯಕ್ಕೆ 202 ಕಿ.ಮೀ ದೂರದಲ್ಲಿದೆ. ಚಿತ್ರದುರ್ಗವು ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಅಸ್ಥಿತ್ವದಲ್ಲಿದೆ ಎಂದು ಹೇಳಲಾಗುತ್ತದೆ. ತುಂಗಾಭದ್ರ ನದಿಯು ವಾಯುವ್ಯದಲ್ಲಿ ಹರಿಯುವುದರೊಂದಿಗೆ ಜಿಲ್ಲೆಯು ವೇದಾವತಿ ನದಿಯ ಕಣಿವೆಯಲ್ಲಿ ನೆಲೆಸಿದೆ.

 

ಹೋಟೆಲ್ ಮಯೂರ ದುರ್ಗ ಘಟಕವು ಚಿತ್ರದುರ್ಗ ಕೋಟೆಯ ಸಮೀಪದಲ್ಲಿದೆ. ಹೋಟೆಲ್ ಘಟಕವು ಪ್ರವಾಸಿಗರಿಗೆ ವಿವಿಧ ರೀತಿಯ ವಸತಿ ಸೌಲಭ್ಯವನ್ನು ಒದಗಿಸುತ್ತದೆ-08 ಹವಾ ನಿಯಂತ್ರಿತ ಕೊಠಡಿಗಳು, 8 ಹಾಸಿಗೆಯುಳ್ಳ 04 ವಸತಿ ನಿಲಯಗಳನ್ನು ಹೊಂದಿರುವುದಲ್ಲದೇ, ವಿಶೇಷ ದಿನಗಳನ್ನು ಆಚರಿಸಲು ಕಾನ್ಫರೆನ್ಸ್ ಹಾಲ್ ಮತ್ತು ಸಭಾಂಗಣವನ್ನು ಹೊಂದಿರುತ್ತದೆ.

ಹೋಟೆಲ್ ಮಯೂರ ಚಾಲುಕ್ಯ ಬಾದಾಮಿ

ಬಾದಾಮಿ-587201

ಶ್ರೀ ಜಯಲಕ್ಷ್ಮಿ 8970650024

08357-220046

[email protected]

ಮುಂದೆ ನೀವು ಆಶ್ಚರ್ಯ ಪಡುವ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಇಚ್ಛಿಸುವೀರಾ? ಹಾಗಾದರೆ ನೀವು ಉತ್ತರ ಕರ್ನಾಟಕದಲ್ಲಿ ಗುಹೆಗಳಿಂದ ಕೂಡಿರುವ ಬಾದಾಮಿ ಪ್ರದೇಶಕ್ಕೆ ಭೇಟಿ ನೀಡಬಹುದಾಗಿದೆ. ಪ್ರದೇಶವು ತುಕ್ಕುಕೆಂಪು ಬಂಡೆಯ ಮುಖದಿಂದ ಕೆತ್ತಿದ ಶಿಲಾ ದೇವಾಲಯಗಳ ನೆಲೆಯಾಗಿದೆ. ಸ್ಮಾರಕಗಳನ್ನು ರಚಿಸಲು ಶ್ರಮಿಸಿದ ಚಾಲುಕ್ಯ ಶಿಲ್ಪಿಗಳ ಅಸಾಧಾರಣ ಕಲಾತ್ಮಕತೆಯೇ ದೇವಾಲಯಗಳಿಗೆ ಸಾಕ್ಷಿಯಾಗಿದೆ. ಬಾದಾಮಿ ಭಾರತದ ವೈಭವಯುತವಾದ ಭೂತಕಾಲವಾಗಿದ್ದು, 18 ಶಸ್ತ್ರ ಸಜ್ಜಿತ ನಟರಾಜರ 81 ನೃತ್ಯ ಭಂಗಿಗಳನ್ನು, ವಿಷ್ಣುವಿಗೆ ಅರ್ಪಿತವಾದ ದೇವಾಲಯಗಳ ಸುಂದರ ಶಿಲ್ಪಗಳನ್ನು ಹೊಂದಿದೆ.

ಹೋಟೆಲ್ ಮಯೂರ ಚಾಲುಕ್ಯ ಬಾದಾಮಿ ಘಟಕವು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದ್ದು, ಎರಡು ಬ್ಲಾಕ್‍ಗಳನ್ನು ಒಳಗೊಂಡಿರುತ್ತದೆ. ಒಂದು ಬ್ಲಾಕ್‍ನಲ್ಲಿ 10 ಡಬಲ್ ಬೆಡ್ ರೂಮ್‍ಗಳಿದ್ದು, ಅವುಗಳಲ್ಲಿ 6 ಹವಾನಿಯಂತ್ರಿತ ಡಿಲಕ್ಸ್ ಕೊಠಡಿಗಳು ಮತ್ತು 10 ಹವಾನಿಯಂತ್ರಿತ ಸೆಮಿ ಡಿಲಕ್ಸ್ ಕೊಠಡಿಗಳು ಮತ್ತು ಇನ್ನೊಂದು ಬ್ಲಾಕ್‍ನಲ್ಲಿ 10 ಹವಾ ರಹಿತ ಕೊಠಡಿಗಳಿದ್ದು, ಅವುಗಳಲ್ಲಿ 04 ಡಬಲ್ ಬೆಡ್ ರೂಮ್‍ಗಳು ಮತ್ತು 02 ಮೂರು ಬೆಡ್‍ಗಳ ರೂಮ್‍ಗಳನ್ನು ಒಳಗೊಂಡಿರುತ್ತದೆ. ಹೋಟೆಲ್ ರೆಸ್ಟೋರೆಂಟ್ ಮತ್ತು ಬೀರ್ ಪಾರ್ಲರ್‍ಗಳ ವ್ಯವಸ್ಥೆಯನ್ನು ಸಹಾ ಹೊಂದಿರುತ್ತದೆ.

ಹೋಟೆಲ್ ಮಯೂರ ಕಾವೇರಿ ಕೆ.ಆರ್.ಎಸ್ (ಬೃಂದಾವನ್ ಉದ್ಯಾನಗಳು)

ಕೃಷ್ಣರಾಜ ಸಾಗರ (ಬೃಂದಾವನ ಗಾರ್ಡನ್) ಮಂಡ್ಯ-571607

ಶ್ರೀ ಮಂಜೇಗೌಡ 8970650022

08236-297189

(English) [email protected]

Brindavan Gardens is one of the most beautiful gardens in the country and a must-visit tourist attraction. The garden starts with exotic flowering plants and ornamental trees and ends with a wondering experience. The gardens are a symphony of manicured lawns, brilliant flower-beds and exquisite topiary with water flowing through the center. The best time to visit Brindavan Gardens is during the mind-blowing fountain show when the garden turns into a virtual fairyland.

Hotel Mayura Kauvery KRS has a view of the colourful gardens and provides an ideal opportunity to experience its charm at different times of the day. The hotel holds 20 rooms – 5 air-conditioned double bedrooms and 15 standard double bedrooms. There’s also a restaurant with a bar for guests to have fun at anytime of the day with a beautiful landscape.

ಹೋಟೆಲ್ ಮಯೂರ ಬಿಳಿಗಿರಿ, ಬಿ.ಆರ್.ಹಿಲ್ಸ್

ಯಳಂದೂರು, ಬಿ.ಆರ್. ಹಿಲ್ಸ್, ಚಾಮರಾಜನಗರ-571313

ಶ್ರೀ ಮಹಾದೇವಸ್ವಾಮಿ 8970650068

08226-244111

[email protected]

Sorry, this entry is only available in English.

ಗುತ್ತಿಗೆ ನಿರ್ವಹಣೆಯ ಹೋಟೆಲ್‌ಗಳು

  • ಪ್ಯಾರಾಡೈಸ್ ವೈಲ್ಡ್ ಹಿಲ್ಸ್ ರೆಸಾರ್ಟ್
  • ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್- ಮಲ್ಪೆ ಬೀಚ್

ಪ್ಯಾರಾಡೈಸ್ ವೈಲ್ಡ್ ಹಿಲ್ಸ್ ರೆಸಾರ್ಟ್

ನಿಗಮದ ಆಸ್ತಿಯಾಗಿರುವ ಪ್ಯಾರಾಡೈಸ್ ವೈಲ್ಡ್ ಹಿಲ್ಸ್ ರೆಸಾರ್ಟ್‍ನ್ನು ನಿರ್ವಹಣೆ ಮಾಡಲು ಒಪ್ಪಂದದ ಆಧಾರದ ಮೇಲೆ ಗುತ್ತಿಗೆಗೆ ನೀಡಲಾಗಿರುತ್ತದೆ. ಈ ರೆಸಾರ್ಟ್ ಸೊಂಪಾದ ಮತ್ತು ರಮಣೀಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದ್ದು, ಕರ್ನಾಟಕ ಪ್ರಸಿದ್ಧ ದೇವಾಲಯಗಲ್ಲಿ ಒಂದಾದ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಾಸ್ಥಾನದಿಂದ ಕೇವಲ 20 ನಿಮಿಷಗಳ ದೂರದಲ್ಲಿದೆ. ಈ ಸ್ಥಳವು ಪ್ರಕೃತಿ ಪ್ರಿಯರು, ಟ್ರಕ್ಕಿಂಗ್ ಮಾಡಲು ಬಯಸುವವರಿಗೆ ಮತ್ತು ತೀರ್ಥಯಾತ್ರೆಯ ಪ್ರಯಾಣಿಕರಿಗೆ ವಿಶ್ರಮಿಸಲು ಉತ್ತಮ ಸ್ಥಳವಾಗಿದೆ.
ಪ್ಯಾರಾಡೈಸ್ ರೆಸಾರ್ಟ್ ಪಶ್ಚಿಮ ಘಟ್ಟದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಐಷಾರಾಮಿ ರೆಸಾರ್ಟ್ ಆಗಿದೆ. ಈ ರೆಸಾರ್ಟ್‍ಗೆ ಆಗಮಿಸುವ ಅತಿಥಿಗಳು ಕೊಡಚಾದ್ರಿ ಬೆಟ್ಟದ ಸೌಂದರ್ಯವನ್ನು ವೀಕ್ಷಿಸುವುದರೊಂದಿಗೆ, ಪ್ರಶಾಂತವಾದ ಪರಿಸರದ ಮಡಿಲಿನಲ್ಲಿ ಸಂಪೂರ್ಣ ತನ್ಮಯರಾಗಿ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಬಹುದಾಗಿದೆ. ಇಲ್ಲಿ ಬೀಸುವ ತಂಗಾಳಿ, ಹಕ್ಕಿಗಳ ಕಲರವ ಮತ್ತು ಹಸಿರಿನಿಂದ ಕೂಡಿದ ವಾತಾವರಣ ಅತಿಥಿಗಳಿಗೆ ಒಂದು ಹೊಸ ಅನುಭವವನ್ನು ನೀಡುವುದರೊಂದಿಗೆ ಮನಸ್ಸಿಗೆ ಹೊಸ ಹುರುಪನ್ನು ಮೂಡಿಸುತ್ತದೆ.
ಇಲ್ಲಿಗೆ ಆಗಮಿಸುವ ವಿವಿಧ ಮಾದರಿಯ ಅಥಿಥಿಗಳಾದ ಮಕ್ಕಳು, ಪೋಷಕರು, ಯಾತ್ರಿಕರು, ಚಾರಣಿಗರಿಗೆ ಬೇಸರಗೊಳ್ಳಲು ಯಾವುದೇ ಅವಕಾಶವನ್ನು ನೀಡದೇ, ಕ್ರಿಯಾಶೀಲರಾಗಿರಲು ಯಾವುದಾದರು ಚಟುವಟಿಕೆಗಳನ್ನು ಆಯೋಜಿಸುತ್ತೇವೆ. ಪ್ಯಾರಾಡೈಸ್‍ನಲ್ಲಿ ವಿವಿಧ ಮಾದರಿಯ ಒಳಾಂಗಣ ಆಟಗಳಾದ ಟೆನ್ನಿಸ್ ಕೋರ್ಟ್, ಬಾಸ್ಕೆಟ್ ಕೋರ್ಟ್, ಸೈಕ್ಲಿಂಗ್ ಹಾಗೂ ಮುಂತಾದ ಚಟುವಟಿಕೆಗಳನ್ನು ಹೊಂದಿರುತ್ತದೆ. ಒಂದು ವೇಳೆ ನೀವು ರಜಾ ದಿನಗಳಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ಮಾಡದೇ ಕೇವಲ ವಿಶ್ರಾಂತಿಯನ್ನು ಬಯಸುವುದಾದರೆ ನಮ್ಮ ರೆಸಾರ್ಟ್‍ನಲ್ಲಿ ಸ್ನೇಹಶೀಲ ಕೊಠಡಿಗಳು ಮತ್ತು ರೆಸಾರ್ಟ್‍ನ ಸುತ್ತಮುತ್ತಲಿನ ಪರಿಸರವು ನಿಮಗೆ ಸಹಾಯಕವಾಗಿದೆ.
ನಮ್ಮ ರೆಸಾರ್ಟ್‍ನಲ್ಲಿ ಪ್ರತ್ಯೇಕ ಸಸ್ಯಹಾರಿ ಮತ್ತು ಮಾಂಸಹಾರಿ ರೆಸ್ಟೋರೆಂಟ್ ಲಭ್ಯವಿದ್ದು, ಅತಿಥಿಗಳಿಗೆ ಪ್ರೀತಿ ಮತ್ತು ಕಾಳಜಿಯಿಂದ ರುಚಿಯಾದ ಅಡುಗೆಯನ್ನು ತಯಾರಿಸಿ ನೀಡಲಾಗುವುದು.
ರೆಸಾರ್ಟ್‍ಗೆ ಆಗಮಿಸುವ ಸಸ್ಯಹಾರಿ ಅತಿಥಿಗಳಿಗೆ ಮಾಲ್ಗುಡಿ ಕೆಫೆ ಯು ದಕ್ಷಿಣ ಭಾರತದ ಅತ್ಯಂತ ರುಚಿಯಾದ ಆಹಾರವನ್ನು ತಯಾರಿಸಿ ನೀಡುತ್ತದೆ ಹಾಗೂ ಮಾಂಸಹಾರಿ ಅತಿಥಿಗಳಿಗೆ ಸೀಶೆಲ್ಸ್ ರೆಸ್ಟೋರೆಂಟ್ ನವರು ಕರಾವಳಿ ಸಮುದ್ರ ಪ್ರದೇಶದ ಮಾದರಿಯಲ್ಲಿ ಆಹಾರವನ್ನು ತಯಾರಿಸಿ ಒದಗಿಸುತ್ತದೆ. ಎಲ್ಲ ಸಮುದ್ರದ ಆಹಾರಗಳು ಮಲ್ಪೆ ಬಂದರಿನಿಂದ ಸರಬರಾಜು ಮಾಡಿಕೊಳ್ಳುವುದರಿಂದ ತಾಜಾತನವನ್ನು ಹೊಂದಿರುತ್ತದೆ.

ನೀವು ನಿಮ್ಮ ರಜಾ ದಿನಗಳನ್ನು ಪರ್ವತವಿರುವ ಭೂ ಪ್ರದೇಶಗಳಲ್ಲಿ ಕಳೆಯಲು ಬಯಸಿದರೆ, ಕರ್ನಾಟಕದ ಕೊಡಚಾದ್ರಿಯಲ್ಲಿರುವ ಸುಂದರವಾದ ಪ್ಯಾರಾಡೈಸ್ ರೇಸಾರ್ಟ್‍ಗೆ ಭೇಟಿ ನೀಡಿ. ಇದು ಬೆಂಗಳೂರಿನಿಂದ ಕೇವಲ 400 ಕಿ.ಮೀ ದೂರ ಹಾಗೂ ಉಡುಪಿಯಿಂದ ಪ್ರಯಾಣವಾಗಿದ್ದು, ಇದು ಕರ್ನಾಟಕದ ನೈಸರ್ಗಿಕ ಪರಂಪಡೆ ಮತ್ತು ಸೌಂದರ್ಯವನ್ನು ಅನ್ವೇಷಿಸುವ ಪ್ರಯಾಣಿಕರಿಗೆ ಸೂಕ್ತವಾದ ಸ್ಥಳವಾಗಿದೆ.

ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್- ಮಲ್ಪೆ ಬೀಚ್

ನಿರ್ವಹಣೆಗಾಗಿ ಪಡೆದ ಕೆ.ಎಸ್.ಟಿ.ಡಿ.ಸಿ ಯ ಆಸ್ತಿಗಳಲ್ಲಿ ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ಕರಾವಳಿ ಪ್ರದೇಶದಲ್ಲಿಯೇ ಉತ್ತಮವಾದ ರೆಸಾರ್ಟ್ ಆಗಿದ್ದು, ತಂಗಲು ಉತ್ತಮ ಸ್ಥಳವಾಗಿದೆ.
ನೀವು ಬೀಚ್ ಪ್ರೇಮಿಯಾಗಿದ್ದಲ್ಲಿ, ಈ ಪ್ರದೇಶವನ್ನು ವೀಕ್ಷಿಸಿದಲ್ಲಿ ತುಂಬಾ ಸಂಭ್ರಮಿಸುತ್ತೀರಿ. ನೀವು ನೀಲಿ ಬಣ್ಣದಲ್ಲಿ ಹೊಳೆಯುವ ಅರೇಬಿಯನ್ ಸಮುದ್ರಕ್ಕೆ ಹತ್ತಿರವಾಗುತ್ತಿದ್ದಂತೆ, ನಿಮಗೆ ಬೇರೆ ಜಗತ್ತನ್ನು ಪ್ರವೇಶಿಸಿದ ಅನುಭವ ಉಂಟಾಗಲಿದ್ದು, ಈ ಅದ್ಭುತ ಸೌಂದರ್ಯದ ಜಗತ್ತಿಗೆ ಅಂತ್ಯವಿರುವುದಿಲ್ಲ.
ಕರ್ನಾಟಕದ ಕರಾವಳಿ ಪಟ್ಟಣವಾದ ಮಲ್ಪೆ ಅದ್ಭುತ ಭೂ ದೃಶ್ಯಗಳು ಮತ್ತು ಅರೇಬಿಯನ್ ಸಮುದ್ರದ ಕರಾವಳಿಯ ನೈಸರ್ಗಿಕ ಅನುಭವವನ್ನು ಹೊಂದಿರುವ ಸ್ಥಳವಾಗಿದೆ. ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ನಿಮಗೆ ಸ್ವರ್ಗದ ಅನುಭವವನ್ನು ನೀಡುತ್ತದೆ. ಮಲ್ಪೆ ಬೀಚ್‍ನಲ್ಲಿರುವ ಬಿಳಿ ಮರಳಿನ ಉದ್ದಕ್ಕೂ ನೆಲೆಗೊಂಡಿರುವ ಈ ರೆಸಾರ್ಟ್ ಸರಳತೆ ಮತ್ತು ಸೌಕರ್ಯಗಳಿಂದ ಕೂಡಿದ ಪ್ಯಾಕೇಜ್‍ನ್ನು ಹೊಂದಿದೆ.
ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ಸಂಪೂರ್ಣ ಹವಾ ನಿಯಂತ್ರಿತ ಕೊಠಡಿಗಳನ್ನು ಹೊಂದಿದ್ದು, ಈ ಕೊಠಡಿಯಿಂದಲೇ ಸಮುದ್ರದ ಸೊಗಸಾದ ನೋಟವನ್ನು ವೀಕ್ಷಿಸಬಹುದಾಗೊದೆ. ಇದು ಬಿಸಿ ಮತ್ತು ತಣ್ಣನೆಯ ಹರಿಯುವ ನೀರು, ಇಂಟರ್‍ಕಾಮ್‍ಗಳು, ಲಾಬಿಯಲ್ಲಿ ಉಚಿತ ವೈ-ಪೈ ಸಂಪರ್ಕವನ್ನು ಹೊಂದಿದೆ ಹಾಗೂ ಭಾರದಲ್ಲಿ ಉಚಿತ ವೈ-ಪೈ ಸಂಪರ್ಕವನ್ನು ನೀಡುತ್ತಿರುವ ಏಕೈಕ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಡಲತೀರದಲ್ಲಿರುವ ಆಸ್ತಿಯು 02 ರೆಸ್ಟೋರೆಂಟ್‍ಗಳಿಗೆ ಹೆಸರುವಾಸಿಯಾಗಿದೆ:
ಒಂದು ರೆಸ್ಟೋರೆಂಟ್‍ನಲ್ಲಿ ಸಮುದ್ರ ತೀರದ ವಿಶೇಷ ಆಹಾರಗಳನ್ನು ಸ್ಥಳೀಯ ಪಾಕ ಪದ್ದತಿಯಲ್ಲಿಯೇ ತಯಾರಿಸುವ ರೆಸ್ಟೋರೆಂಟ್ ಆಗಿದ್ದು, ಇಲ್ಲಿಂದ ಮಲ್ಪೆ ಬೀಚ್‍ನ ಮೇಲಿನ ಅದ್ಭುತ ನೋಟವನ್ನು ಸವಿಯಬಹುದಾಗಿದೆ.
ಇನ್ನೊಂದು ರೆಸ್ಟೋರೆಂಟ್‍ನಲ್ಲಿ ದಕ್ಷಿಣ ಕರ್ನಾಟಕ ಮತ್ತು ಇತರೆ ಜಾಗತಿಕ ಪಾಕ ಪದ್ದತಿಗಳಾದ ಮೊಘಲೈ, ಚೈನೀಸ್ ಮತ್ತು ಕಾಂಟಿನೆಂಟಲ್, ಸೀಶೇಲ್ಸ್ ಮಾದರಿಯ ಆಹಾರವನ್ನು ತಯಾರಿಸುವ ರೆಸ್ಟೋರೆಂಟ್ ಆಗಿದ್ದು, ಸ್ಥಳೀಯ ಭಕ್ಷಗಳ ರುಚಿಯನ್ನು ಸವಿಯಲು ಅನುವು ಮಾಡಿಕೊಡುತ್ತದೆ.
ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್‍ನಲ್ಲಿ ರಜಾ ದಿನಗಳನ್ನು ಪರಿಪೂರ್ಣವಾಗಿ ಕಳೆಯಲು ಬೋಜನ ಕೂಟದ ಹಾಲ್, ಕಾನ್ವೆಷನಲ್ ಹಾಲ್, ಡಿಸ್ಕೋಥೇಕ್, ನೀರಿಗೆ ಸಂಬಂಧಿಸಿದ ಆಟಗಳು ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುತ್ತದೆ.

Paradise Wild Hills Resort

A property of KSTDC outsourced for management is the best place to stay anywhere located at the foothills of the rich, lush and scenic Western Ghats and at a mere 20-minute distance from the auspicious Kollur Mookambika Temple, Paradise Wild Hills, Kodachadri is the perfect spot for nature lovers, trekkers and pilgrimage travellers to relax and unwind.

Paradise Wild Hills is a luxury resort surrounded by the lush green foliage of the Western Ghats. At Paradise Wild Hills, guests can completely immerse themselves into the quiet, peaceful and serene surroundings of the Kodachadri Hills and experience the untouched beauty of its scenic location. The fresh air, the chirping birds and the lush green surroundings enable the guests to destress and revitalise their mind, body and soul.

We offer a wide range of activities to engage our every guest, whether they are children, parents, pilgrims, trekkers, etc. We do not give our guests reasons to get bored. Paradise Wild Hills Resort has various indoor games, a tennis court, a basketball court, a range of adventure activities, bonfire facilities, cycling tracks and so much more. If you are someone who simply wants to relax and not do anything on a holiday, then you have our cosy rooms and picturesque surroundings to help you.

Delicious food that is prepared with love and care is offered to our guests at the resort. We have separate veg and non-veg restaurants.

  • Malgudi Café serves pure-vegetarian South Indian delicacies to satisfy the food needs of our vegetarian guests.
  • Seashells Restaurant serves coastal seafood cuisine for our non-veg loving guests. All seafood is freshly-sourced from the Malpe harbour.

If you love the mountains and wish to spend your vacations in such unspoilt mountain terrains, then you must visit the scenic Paradise Wild Hills Resort in Kodachadri, Karnataka. Just 400 km from Bangalore and a two-hour drive from Udupi, it is the perfect location for travellers exploring Karnataka’s natural heritage and beauty.