• img
  • img
  • img
  • img

ಗುತ್ತಿಗೆ ನಿರ್ವಹಣೆಯ ಹೋಟೆಲ್‌ಗಳು

ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್- ಮಲ್ಪೆ ಬೀಚ್

  • ಅವಲೋಕನ
  • ಇಲ್ಲಿಗೆ ತಲುಪಲು
  • ಸ್ಥಳ
  • ದರ
  • ಸೌಲಭ್ಯಗಳು
  • ಮಾಡಬೇಕಾದ ಕೆಲಸಗಳು
  • ಗ್ಯಾಲರಿ

ನಿರ್ವಹಣೆಗಾಗಿ ಪಡೆದ ಕೆ.ಎಸ್.ಟಿ.ಡಿ.ಸಿ ಯ ಆಸ್ತಿಗಳಲ್ಲಿ ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ಕರಾವಳಿ ಪ್ರದೇಶದಲ್ಲಿಯೇ ಉತ್ತಮವಾದ ರೆಸಾರ್ಟ್ ಆಗಿದ್ದು, ತಂಗಲು ಉತ್ತಮ ಸ್ಥಳವಾಗಿದೆ.
ನೀವು ಬೀಚ್ ಪ್ರೇಮಿಯಾಗಿದ್ದಲ್ಲಿ, ಈ ಪ್ರದೇಶವನ್ನು ವೀಕ್ಷಿಸಿದಲ್ಲಿ ತುಂಬಾ ಸಂಭ್ರಮಿಸುತ್ತೀರಿ. ನೀವು ನೀಲಿ ಬಣ್ಣದಲ್ಲಿ ಹೊಳೆಯುವ ಅರೇಬಿಯನ್ ಸಮುದ್ರಕ್ಕೆ ಹತ್ತಿರವಾಗುತ್ತಿದ್ದಂತೆ, ನಿಮಗೆ ಬೇರೆ ಜಗತ್ತನ್ನು ಪ್ರವೇಶಿಸಿದ ಅನುಭವ ಉಂಟಾಗಲಿದ್ದು, ಈ ಅದ್ಭುತ ಸೌಂದರ್ಯದ ಜಗತ್ತಿಗೆ ಅಂತ್ಯವಿರುವುದಿಲ್ಲ.
ಕರ್ನಾಟಕದ ಕರಾವಳಿ ಪಟ್ಟಣವಾದ ಮಲ್ಪೆ ಅದ್ಭುತ ಭೂ ದೃಶ್ಯಗಳು ಮತ್ತು ಅರೇಬಿಯನ್ ಸಮುದ್ರದ ಕರಾವಳಿಯ ನೈಸರ್ಗಿಕ ಅನುಭವವನ್ನು ಹೊಂದಿರುವ ಸ್ಥಳವಾಗಿದೆ. ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ನಿಮಗೆ ಸ್ವರ್ಗದ ಅನುಭವವನ್ನು ನೀಡುತ್ತದೆ. ಮಲ್ಪೆ ಬೀಚ್‍ನಲ್ಲಿರುವ ಬಿಳಿ ಮರಳಿನ ಉದ್ದಕ್ಕೂ ನೆಲೆಗೊಂಡಿರುವ ಈ ರೆಸಾರ್ಟ್ ಸರಳತೆ ಮತ್ತು ಸೌಕರ್ಯಗಳಿಂದ ಕೂಡಿದ ಪ್ಯಾಕೇಜ್‍ನ್ನು ಹೊಂದಿದೆ.
ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್ ಸಂಪೂರ್ಣ ಹವಾ ನಿಯಂತ್ರಿತ ಕೊಠಡಿಗಳನ್ನು ಹೊಂದಿದ್ದು, ಈ ಕೊಠಡಿಯಿಂದಲೇ ಸಮುದ್ರದ ಸೊಗಸಾದ ನೋಟವನ್ನು ವೀಕ್ಷಿಸಬಹುದಾಗೊದೆ. ಇದು ಬಿಸಿ ಮತ್ತು ತಣ್ಣನೆಯ ಹರಿಯುವ ನೀರು, ಇಂಟರ್‍ಕಾಮ್‍ಗಳು, ಲಾಬಿಯಲ್ಲಿ ಉಚಿತ ವೈ-ಪೈ ಸಂಪರ್ಕವನ್ನು ಹೊಂದಿದೆ ಹಾಗೂ ಭಾರದಲ್ಲಿ ಉಚಿತ ವೈ-ಪೈ ಸಂಪರ್ಕವನ್ನು ನೀಡುತ್ತಿರುವ ಏಕೈಕ ಬೀಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಡಲತೀರದಲ್ಲಿರುವ ಆಸ್ತಿಯು 02 ರೆಸ್ಟೋರೆಂಟ್‍ಗಳಿಗೆ ಹೆಸರುವಾಸಿಯಾಗಿದೆ:
ಒಂದು ರೆಸ್ಟೋರೆಂಟ್‍ನಲ್ಲಿ ಸಮುದ್ರ ತೀರದ ವಿಶೇಷ ಆಹಾರಗಳನ್ನು ಸ್ಥಳೀಯ ಪಾಕ ಪದ್ದತಿಯಲ್ಲಿಯೇ ತಯಾರಿಸುವ ರೆಸ್ಟೋರೆಂಟ್ ಆಗಿದ್ದು, ಇಲ್ಲಿಂದ ಮಲ್ಪೆ ಬೀಚ್‍ನ ಮೇಲಿನ ಅದ್ಭುತ ನೋಟವನ್ನು ಸವಿಯಬಹುದಾಗಿದೆ.
ಇನ್ನೊಂದು ರೆಸ್ಟೋರೆಂಟ್‍ನಲ್ಲಿ ದಕ್ಷಿಣ ಕರ್ನಾಟಕ ಮತ್ತು ಇತರೆ ಜಾಗತಿಕ ಪಾಕ ಪದ್ದತಿಗಳಾದ ಮೊಘಲೈ, ಚೈನೀಸ್ ಮತ್ತು ಕಾಂಟಿನೆಂಟಲ್, ಸೀಶೇಲ್ಸ್ ಮಾದರಿಯ ಆಹಾರವನ್ನು ತಯಾರಿಸುವ ರೆಸ್ಟೋರೆಂಟ್ ಆಗಿದ್ದು, ಸ್ಥಳೀಯ ಭಕ್ಷಗಳ ರುಚಿಯನ್ನು ಸವಿಯಲು ಅನುವು ಮಾಡಿಕೊಡುತ್ತದೆ.
ಪ್ಯಾರಾಡೈಸ್ ಐಸ್‍ಲೇ ಬೀಚ್ ರೆಸಾರ್ಟ್‍ನಲ್ಲಿ ರಜಾ ದಿನಗಳನ್ನು ಪರಿಪೂರ್ಣವಾಗಿ ಕಳೆಯಲು ಬೋಜನ ಕೂಟದ ಹಾಲ್, ಕಾನ್ವೆಷನಲ್ ಹಾಲ್, ಡಿಸ್ಕೋಥೇಕ್, ನೀರಿಗೆ ಸಂಬಂಧಿಸಿದ ಆಟಗಳು ಮತ್ತು ಇತರೆ ಸೌಲಭ್ಯಗಳನ್ನು ಒದಗಿಸುತ್ತದೆ.

ENQUIRE NOW Book Now

ಸೂಚನೆ:

  • ಇಲ್ಲಿ ಪ್ರದರ್ಶಿಸಲಾದ ದರಗಳು ಮೂಲ ದರಗಳಾಗಿರುತ್ತದೆ (ತೆರಿಗೆ ಹೆಚ್ಚುವರಿ)
  • ಮೇಲಿನ ದರಗಳಲ್ಲಿ ಕಾಲ ಕಾಲಕ್ಕನುಗುಣವಾಗಿ ದರಗಳನ್ನು ಹೆಚ್ಚಿಸಲಾಗುವುದು.

ಹೋಟೆಲ್ ಬುಕ್ಕಿಂಗ್‍ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:

  • ಚೆಕ್ ಇನ್ ಸಮಯ ಮಧ್ಯಾಹ್ನ 1.00 ಗಂಟೆ. ಸದರಿ ಸಮಯಕ್ಕಿಂತ ಮುಂಚೆ ಚೆಕ್ ಇನ್ ಮಾಡಲು ಬಯಸುವ ಮನವಿಯನ್ನು ಲಭ್ಯತೆಗನುಗುಣವಾಗಿ ಪರಿಗಣಿಸಲಾಗುವುದು.
  • ಚೆಕ್ ಔಟ್ ಸಮಯ ಬೆಳಿಗ್ಗೆ 11.00 ಗಂಟೆ.
  • ಬುಕ್ಕಿಂಗ್‍ಗಳಲ್ಲಿ ಒಮ್ಮೆ ಮಾತ್ರ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದ್ದು, ಕನಿಷ್ಠ ಚೆಕ್ ಇನ್ ದಿನಾಂಕದ 24.00 ಗಂಟೆಗಳ ಮೊದಲು ತಿದ್ದಪಡಿ ಮಾಡಲು ಅವಕಾಶವಿರುತ್ತದೆ.

 ದಯವಿಟ್ಟು ಗಮನಿಸಿ: ಬುಕ್ಕಿಂಗ್‍ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಮಯೂರ ಹೋಟೆಲ್‍ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.

  • ಸುಂಕವು ತೆರಿಗಳನ್ನು ಹೊರತುಪಡಿಸಿರುತ್ತದೆ.
  • ಪ್ರದರ್ಶಿತ ದರಗಳು ಮೂಲ ದರಗಳಾಗಿರುತ್ತವೆ (ಜಿ.ಎಸ್.ಟಿ. ಹೆಚ್ಚುವರಿಯಾಗಿರುತ್ತದೆ).
  • ಕಾಲೋಚಿತ ಹೆಚ್ವಳವು ಮೂಲ ಸುಂಕದ ಮೇಲೆ ಇರುತ್ತದೆ.
  • ಚಕ್ ಇನ್ ದಿನದಂದು ಹೆಚ್ಚುವರಿಯಾಗಿ ಹಾಸಿಗೆ ಪಡೆದಲ್ಲಿ ಅಥವಾ ಹೆಚ್ಚುವರಿ ವ್ಯಕ್ತಿ ಇದ್ದಲ್ಲಿ ಹೆಚ್ಚುವರಿ ಶುಲ್ಕಗಳು ಅನ್ವಯವಾಗುತ್ತದೆ.
  • ಷರತ್ತು ಮತ್ತು ನಿಯಮಗಳನ್ನೊಳಪಟ್ಟು, ಚೆಕ್ ಇನ್ ದಿನಾಂಕದಂದು ಹೋಟೆಲ್‍ನಲ್ಲಿಯೇ ಪಾವತಿಸುವ ಆಯ್ಕೆ ಸಹ ಲಭ್ಯವಿರುತ್ತದೆ.

 ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು

  • 07 ದಿನಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ, ಪೂರ್ಣ ಮೊತ್ತವನ್ನು ಮರುಪಾವತಿ ಮಾಡಲಾಗುವುದು.
  • 07 ದಿನಗಳೊಳಗೆ ಅಥವಾ 48 ಗಂಟೆಗಳ ಮುಂಚಿತವಾಗಿ ಬುಕ್ಕಿಂಗ್ ರದ್ದುಪಡಿಸಿದಲ್ಲಿ 25% ಮೊತ್ತವನ್ನು ಕಡಿತಗೊಳಿಸಿ, ಪಾವತಿಸಲಾಗುವುದು.
  • ಚೆಕ್ ಇನ್ ದಿನಾಂಕದ 24 ಗಂಟೆಗಳೊಳಗೆ ಬುಕ್ಕಿಂಗ್ ರದ್ದುಪಡಿಸಿದ್ದಲ್ಲಿ ಯಾವುದೇ ಮರುಪಾವತಿ ಮಾಡಲಾಗುವುದಿಲ್ಲ.

 ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಕೆಳಕಂಡಂತಿರುತ್ತವೆ.

  • 24 ಗಂಟೆಗಳ ಮುಂಚಿತವಾಗಿ ರದ್ದುಪಡಿಸಿದಲ್ಲಿ, ಯಾವುದೇ ರದ್ದತಿ ಶುಲ್ಕಗಳಿರುವುದಿಲ್ಲ
  • 24 ಗಂಟೆಗಳೊಳಗಾಗಿ ರದ್ದುಪಡಿಸಿದಲ್ಲಿ, ಯಾವುದೇ ಮರುಪಾವತಿ ಇರುವುದಿಲ್ಲ.