1. ಎಲ್ಲಾ ಪ್ರವೇಶ ಶುಲ್ಕಗಳು ಮತ್ತು ಉಪಹಾರ-ಊಟ/ತಿಂಡಿತಿನಿಸುಗಳು ಮುಂತಾದ ಆಹಾರ ಪದಾರ್ಥಗಳ ವೆಚ್ಚಗಳನ್ನು ಈ ಪ್ರವಾಸದಲ್ಲಿ ಕಾಯ್ದಿರಿಸಿರುವ ಪ್ರವಾಸಿಗರೇ ಭರಿಸತಕ್ಕದ್ದು
2. ದೋಣಿ ವಿಹಾರದ ಶುಲ್ಕಗಳನ್ನು, ಈ ಪ್ರವಾಸದಲ್ಲಿ ಆಸನಗಳನ್ನು ಕಾಯ್ದಿರಿಸಿಕೊಂಡಿರುವ ಪ್ರವಾಸಿಗರೇ ಸ್ವತ: ಪಾವತಿಸತಕ್ಕದ್ದು.
3. ಈ ಪ್ರವಾಸ ಕೈಪಿಡಿಯು/ಕಾರ್ಯಕ್ರಮವು ಬದಲಾವಣೆಯ ಷರತ್ತಿಗೆ ಒಳಪಟ್ಟಿರುತ್ತದೆ.
4. ಒಂದು ಕೊಠಡಿಯಲ್ಲಿ ಮೂರು ವ್ಯಕ್ತಿಗಳು ತಂಗಿದಲ್ಲಿ, ಹೆಚ್ಚುವರಿ ಹಾಸಿಗೆಯನ್ನು ಒದಗಿಸಲಾಗುವುದು.

ಈ ಪ್ರವಾಸದಲ್ಲಿ ಉಪಯೋಗಿಸಿಕೊಳ್ಳಲಾಗುವ ಹೋಟೆಲುಗಳು ಹಾಗೂ ಊಟ-ಉಪಹಾರ ಮಂದಿರಗಳು (ಲಭ್ಯತೆಯ ಷರತ್ತಿಗೆ ಒಳ¥ಟ್ಟಂತೆ):

– ಕರ್ನಾಟಕ ಹೋಟೆಲುಗಳು, ಊಟಿ
– ಕರ್ನಾಟಕ ರೆಸ್ಟೋರೆಂಟು, ಮದ್ದೂರು
– ಕರ್ನಾಟಕ ಹೋಟೆಲುಗಳು, ಕೃಷ್ಣ ರಾಜ ಸಾಗರ

ದಯವಿಟ್ಟು ಪ್ರಮುಖವಾಗಿ ಗಮನಿಸಿರಿ

– ಈ ಪ್ರವಾಸವನ್ನು ಕಾರ್ಯಾಚರಣೆಗೊಳಿಸುವ ಸಲುವಾಗಿ ಕನಿಷ್ಠ 15 ಪ್ರವಾಸಿಗರ ಅಗತ್ಯತೆಯಿರುತ್ತದೆ.
– ಪ್ರವಾಸದ ವೇಳೆಯಲ್ಲಿ ನಗದು ಅಥವಾ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಲ್ಲಿ kstdc.co ಆಗಲಿ ಅಥವಾ ಅದರ ಸಿಬ್ಬಂದಿಯೇ ಆಗಲಿ ಜವಾಬ್ದಾರಾಗಿರುವುದಿಲ್ಲ.

.

1. 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸಂಪೂರ್ಣವಾಗಿ ಪಾವತಿಯನ್ನು ಮಾಡತಕ್ಕದ್ದು.  5 ವರ್ಷದ ಕೆಳಗಿನ ಮಕ್ಕಳಿಗೆ ಆಸನವನ್ನು ಒದಗಿಸುವುದಿಲ್ಲ.
2. ನೀವು ಬಸ್ಸನ್ನು ತಪ್ಪಿಸಿಕೊಂಡಲ್ಲಿ, ನಿಗಮವು ಜವಾಬ್ದಾರಿಯುತವಾಗಿರುವುದಿಲ್ಲ ಅಥವಾ ಮೊತ್ತವನ್ನು ನಿಮಗೆ ಹಿಂತಿರುಗಿಸುವುದಿಲ್ಲ.
3. ಮಾರ್ಗದರ್ಶಿಯೂ ಸೇರಿದಂತೆ ಸಿಬ್ಬಂದಿಗೆ ಬಕ್ಷೀಸು ಕೊಡುವುದನ್ನು ನಿಷೇಧಿಸಲಾಗಿದೆ.  ಬಿಎಚ್‍ಎಸ್ ಟ್ರಿಪ್ಪುಗಳನ್ನು ಹೊರತುಪಡಿಸಿದಂತೆ, ಕರಾಪ್ರಅನಿವು ಅವರುಗಳಿಗೆ ಪಾವತಿಸುತ್ತದೆ.
4. ನಿಗಮವು ಒದಗಿಸುವ ವಿವಿಧ ಅನುಕೂಲತೆಗಳಿಗಾಗಿ ಪ್ರವಾಸಿ ಕೈಪಿಡಿಯನ್ನು ಕೇಳಿ ಪಡೆಯಿರಿ.
5. 24 ಗಂಟೆಗಳ ಒಳಗೆ ಕೋರಿಕೆಗಳು ಬಂದಲ್ಲಿ ಪ್ರಯಾಣವನ್ನು ಮುಂದಕ್ಕೆ ಹಾಕಲಾಗುವುದಿಲ್ಲ. ಪ್ರಯಾಣವನ್ನು ಮುಂದಕ್ಕೆ ಹಾಕಿದಲ್ಲಿ, ರದ್ದತಿಯನ್ನು ಪರಿಗಣಿಸುವುದಿಲ್ಲ
6. ದರಪಟ್ಟಿಯು ಯಾವುದೇ ನೋಟೀಸನ್ನು ನೀಡದೆಯೇ ಪರಿಷ್ಕಣೆಗೊಳಿಸುವ ಷರತ್ತಿಗೆ ಒಳಪಟ್ಟಿರುತ್ತದೆ.
7. ಹಿರಿಯ ನಾಗರಿಕರು ಬಸ್ಸನ್ನು ಹತ್ತುವ ಮೊದಲು ವಯಸ್ಸಿನ ಸಾಕ್ಷಾಧಾರವನ್ನು ಒದಗಿಸತಕ್ಕದ್ದು, ಇಲ್ಲವಾದಲ್ಲಿ ಅವರಿಗೆ ಬಸ್ಸನ್ನು ಹತ್ತಲು ಅವಕಾಶ ನೀಡುವುದಿಲ್ಲ.

ರದ್ದತಿಗೆ ಸಂಬಂಧಿಸಿದ ಕಾರ್ಯನೀತಿ
ಪ್ರವಾಸಕ್ಕೆ ಹೊರಡುವ ದಿನಾಂಕದಂದು ಪ್ರಸ್ತಾಪಿಸಲಾಗಿರುವ ಸಮಯಕ್ಕೆ 48 ಗಂಟೆಗಳ ಮುಂಚಿತವಾಗಿ ಕೋರಿಕೆಯನ್ನು ಸಲ್ಲಿಸಿದಲ್ಲಿ – ಶೇಕಡಾ 10ರಷ್ಟನ್ನು ಕಡಿದುಕೊಳ್ಳಲಾಗುವುದು.
ಪ್ರವಾಸಕ್ಕೆ ಹೊರಡುವ ದಿನಾಂಕದಂದು ಪ್ರಸ್ತಾಪಿಸಲಾಗಿರುವ ಸಮಯಕ್ಕೆ 24 – 47 ಗಂಟೆಗಳ ಮುಂಚಿತವಾಗಿ ಕೋರಿಕೆಯನ್ನು ಸಲ್ಲಿಸಿದಲ್ಲಿ – ಶೇಕಡಾ 25ರಷ್ಟನ್ನು ಕಡಿದುಕೊಳ್ಳಲಾಗುವುದು.
ಪ್ರವಾಸಕ್ಕೆ ಹೊರಡುವ ದಿನಾಂಕದಂದು ಪ್ರಸ್ತಾಪಿಸಲಾಗಿರುವ ಸಮಯಕ್ಕೆ 24 ಗಂಟೆಗಳ ಒಳಗೆ ಕೋರಿಕೆಯನ್ನು ಸಲ್ಲಿಸಿದಲ್ಲಿ – ಯಾವುದೇ ಮೊತ್ತವನ್ನೂ ಮರುಪಾವತಿಸಲಾಗುವುದಿಲ್ಲ

ನೀವು ಈ ಕೆಳಗಿನ ಸ್ಥಳಗಳನ್ನು/ಹೋಟೆಲುಗಳನ್ನು ಇಷ್ಟಪಡಬಹುದು

Enquiry